ಕೇಂದ್ರ ಸರಕಾರದ ಪರ ನಿರಂತರ ಹೇಳಿಕೆ: ಶಶಿ ತರೂರ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ನೇತಾರರಿಂದ ಆಗ್ರಹ

ನವದೆಹಲಿ: ಕೇಂದ್ರ ಸರಕಾರದ ಪರ ನಿರಂತರ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ನ ಹಿರಿಯ ನೇತಾರ ಹಾಗೂ ತಿರುವನಂತಪುರ ಸಂಸ ದರೂ ಆಗಿರುವ ಶಶಿ ತರೂರ್  ವಿರುದ್ಧ    ಹಲವು ಕಾಂಗ್ರೆಸ್ ಮುಖಂಡರು ಕೆಂಡಾಮಂಡಲರಾಗಿ ದ್ದಾರೆ. ಅಲ್ಲದೆ  ಶಶಿ ತರೂರ್ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು  ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರತೊಡಗಿದ್ದಾರೆ.

ಇನ್ನು ಕೆಲವು ಕಾಂಗ್ರೆಸ್  ನೇತಾ ರರು  ಕ್ರಮ ಕೈಗೊಳ್ಳುವ ಮೊದಲು  ಶಶಿ ತರೂರ್‌ರಿಂದ ಸ್ಪಷ್ಟೀಕರಣ ಕೇಳಬೇಕೆಂದು ಆಗ್ರಹಿಸಿದ್ದಾರೆ. ಶಶಿ ತರೂರ್ ಬಿಜೆಪಿಯ ಸೂಪರ್ ವಕ್ತಾರನಂತೆ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ನೇತಾರ ಉದಿತ್ ರಾಜ್  ಸೇರಿದಂತೆ ಹಲವು ನೇತಾರರು ಆಗ್ರಹಪಟ್ಟಿದ್ದಾರೆ.

‘ಆಪರೇಶನ್ ಸಿಂಧೂರ್’ನ ವಿಷಯದಲ್ಲಿ  ಮಾತ್ರವಲ್ಲ ಕೇಂದ್ರ ಸರಕಾರ ಕೈಗೊಂಡ ಹಲವು ತೀರ್ಮಾನಗಳನ್ನು ತರೂರ್  ಸ್ವಾಗತಿಸಿದ್ದಾರೆ. ಮಾತ್ರವಲ್ಲದೆ ಅದರ ಹೆಸರಲ್ಲಿ ಬಿಜೆಪಿ ಸರಕಾರವನ್ನು ಹಾಡಿ ಹೊಗಳಿದ್ದಾರೆ. ಇದು ತರೂರ್ ವಿರುದ್ದ  ಕಾಂಗ್ರೆಸ್ ನೇತಾರರಲ್ಲಿ  ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

RELATED NEWS

You cannot copy contents of this page