ಕೊಡಿಮಾರ್- ಉಪ್ಪಳ ರಸ್ತೆ ಡಾಮರೀಕರಣಗೊಳಿಸಲು ಡಿಫಿ ಚಿನಾಲ ಯೂನಿಟ್ ಆಗ್ರಹ

ಉಪ್ಪಳ: ಚಿನಾಲ ಕೋಡಿಮಾರ್ ಕುಳೂರು- ಉಪ್ಪಳ ರಸ್ತೆ ಶೀಘ್ರ ಡಾಮರೀಕರಣ ಗೊಳಿಸಬೇಕೆಂದು ಡಿಫಿ ಚಿನಾಲ ಯೂನಿಟ್ ಸಮ್ಮೇಳನ ಒತ್ತಾಯಿಸಿದೆ. ಚಿನಾಲದಲ್ಲಿ ನಡೆದ ಸಮ್ಮೇಳನವನ್ನು ಬ್ಲೋಕ್ ಕಾರ್ಯದರ್ಶಿ ವಿನಯ ಕುಮಾರ್ ಉದ್ಘಾಟಿಸಿದರು. ಯೂನಿಟ್ ಉಪಾಧ್ಯಕ್ಷ ಚಂದ್ರಹಾಸ ಧ್ವಜಾರೋಹಣಗೈದರು. ಕಾರ್ಯದರ್ಶಿ ಸಂದೀಪ್ ಕುಮಾರ್ ಸ್ವಾಗತಿಸಿದರು. ಚಿದಾಕಾಂತ್, ದೀಕ್ಷಾ ವಿವಿಧ ಠರಾವು ಮಂಡಿಸಿದರು. ಚಂದ್ರಹಾಸ ಅಧ್ಯಕ್ಷತೆ ವಹಿಸಿದರು. ಲೋಕೇಶ ಸಿ, ಪದ್ಮಜಾ ಸುಧಾಕರ, ಉದಯ ಮಾತನಾಡಿದರು. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂದೀಪ್ ಕುಮಾರ್, ಚರಣ್ ವರದಿ ಮಂಡಿಸಿದರು. ಜೊತೆ ಕಾರ್ಯದರ್ಶಿ ವಿದ್ಯಾ ವಂದಿಸಿದರು.

You cannot copy contents of this page