ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಿಂದ ಕಳವು: ಬೆರಳಚ್ಚು, ಶ್ವಾನದಳದಿಂದ ತನಿಖೆ
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳÀÄ ಕಳವುಗೀಡಾದ ಪ್ರಕರಣಕೆÀ ಸಂಬAಧಿಸಿ ಮಂಜೇಶ್ವರ ಪೋಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ. ಕಾಸರಗೋಡು ಡಿವೈಎಸ್‌ಪಿ ಸುನಿಲ್ ಕುಮಾರ್, ಮಂಜೇಶ್ವರ ಸಿ.ಐ ಕೆ.ರಾಜೀವ್ ಕುಮಾರ್ ನೇತೃತ್ವದಲ್ಲಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ತನಿಖೆ ನಡೆಸಿದರು. ಶ್ವಾನದಳ ಕ್ಷೇತ್ರದಿಂದ ರಸ್ತೆ ತನಕ ತೆರಳಿದೆ. ಒಂದು ಬೆರಳಚ್ಚು ಕೂಡಾ ಪತ್ತೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಹಲವು ಮನೆ, ಕ್ಷೇತ್ರ ಕಳವು ನಡೆದಿದೆ. ಪೋಲೀಸರು ತನಿಖೆ ನಡೆಸುತ್ತಿದ್ದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭಿಸದಿರುವುದು ಸಾರ್ವಜನಿಕರಲ್ಲಿ ಆತಂಕವನ್ನುAಟುಮಾಡಿದೆ. ಕಳವು ಪ್ರಕರಣದ ತನಿಖೆಯ ಅಂಗವಾಗಿ ಪ್ರತ್ಯೇಕ ತಂಡವನ್ನು ಈ ಹಿಂದೆ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೆ ವಾಹನ ತಪಾಸಣೆ ನಡೆಸಿ ಸಂಶಯಾಸ್ಪದವಾಗಿ ಕಂಡು ಬಂದ ವ್ಯಕ್ತಿಗಳನ್ನು ಠಾಣೆಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ.