ಕ್ರಷರ್ ಮೆನೇಜರ್‌ಗೆ ಹಲ್ಲೆ ನಡೆಸಿ ಹಣ ದರೋಡೆಗೈದ ಪ್ರಕರಣ: ಆರೋಪಿಗಳು ಉಪಯೋಗಿಸಿದ ಬಂದೂಕು ಪೊದೆಯಿಂದ ಪತ್ತೆ

ಕಾಸರಗೋಡು: ಮಾರ್ಚ್ 5ರಂದು ಸಂಜೆ ಹೊಸದುರ್ಗ ದ ಕಲ್ಯಾಣ್-ಅಂಬಲತ್ತುAಗರ ಬಳಿ ಹೊಸದುರ್ಗದ ಜಾಸ್ ಗ್ರಾನೈಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಮೆನೇಜರ್ ಕಲ್ಲಿಕೋಟೆ ನಿವಾಸಿ ಪಿ.ಪಿ. ರವೀಂದ್ರನ್ (56)ರಿಗೆ ಬಂದೂಕು ತೋರಿಸಿ ಬೆದರಿಸಿ 10.2 ಲಕ್ಷ ರೂ. ಮತ್ತು ಮೊಬೈಲ್ ಫೋನ್ ದರೋಡೆಗೈದ ಪ್ರಕರಣದ ಆರೋಪಿಗಳು ಉಪಯೋಗಿಸಿದ ಬಂದೂಕನ್ನು ಪೊಲೀಸರು ಪೊದೆಯಿಂದ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದು ಆಟಿಕೆ ಬಂದೂಕು ಆಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ದರೋಡೆಗೆ ಸಂಬAಧಿಸಿ ಬಿಹಾರ ಕತ್ತಿಯಾರ್ ಜಿಲ್ಲೆಯ ಸಮಾಪುರ್ ನಿವಾಸಿಗಳಾದ ಇಬ್ರಾನ್ ಆಲಂ (21), ಮೊಹಮ್ಮದ್ ಮಾಲೀಕ್ ಅಲಿಯಾಸ್ ಎ.ಡಿ. ಮಾಲೀಕ್ (21), ಮೊಹಮ್ಮದ್ ಫಾರೂಕ್ (30) ಮತ್ತು ಅಸ್ಸಾಂ ಹೊಜಾಯಿ ಮಿಲ್ನಾಪುರ್ ನಿವಾಸಿ ಧನಂಜಯ್ ಬೋರಾ (22) ಎಂಬವರನ್ನು ಘಟನೆಯ ಕೆಲವೇ ತಾಸುಗಳೊಳಗಾಗಿ ಪೊಲೀಸರು ಮಂಗಳೂರಿನಿAದ ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೊ ಳಗಾಗಿದ್ದ ಆರೋಪಿಗಳನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಕೋರಿ ಪೊಲೀಸರು ಸಲ್ಲಿಸಿದ ಅರ್ಜಿ ಪ್ರಕಾರ ಆರೋಪಿಗಳನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1) ಮೂರು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದ. ಅದರಂತೆ ಆರೋಪಿಗಳನ್ನು ವಶಕ್ಕೆ ತೆಗೆದ ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂದೂಕು ಎಸೆದಿದ್ದ ಕೋಟಚ್ಚೇರಿ ರೈಲ್ವೇ ಗೇಟ್ ಬಳಿ ಕರೆತಂದು ಅಲ್ಲಿ ನಡೆಸಿದ ಮಾಹಿತಿ ಸಂಗ್ರಹದಲ್ಲಿ ಅಲ್ಲೇ ಪಕ್ಕದ ಪೊದೆಯಿಂದ ಆ ಬಂದೂಕನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದು ನಕಲಿ ಬಂದೂಕು ಆಗಿದೆಯೆಂದು ಇದೇ ಸಂದರ್ಭದಲ್ಲಿ ಪೊಲೀಸರು ತಿಳಿಸಿದ್ದಾರೆ. ಕ್ರಷರ್ ಮೆನೇಜರ್ಗಳ ಮೇಲೆ ಹಲ್ಲೆ ನಡೆಸಿ ಅವರು ಹಣ ಮತ್ತು ಮೊಬೈಲ್ ಫೋನ್ಗಳನ್ನು ದರೋಡೆಗೈದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿ ಯಾಗಲು ಬಳಸಿದ್ದ ಕಾರನ್ನು ಘಟನೆ ನಡೆದ ದಿನದಂದೇ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.
ಆರೋಪಿಗಳ ಪೈಕಿ ಇಬ್ರಾನ್ ಆಲಂ ಕ್ರಶರ್ ಮೆನೇಜರ್ರಿಗ್ತೆ ಬಂದೂಕು ತೋರಿಸಿ ಬೆದರಿಸಿದ್ದನು. ಆರೋಪಿಗಳು ಪರಾರಿಯಾಗಲು ಬಳಸಿದ್ದ ಕಾರನ್ನು ಇನ್ನೋರ್ವ ಆರೋಪಿ ಮೊಹಮ್ಮದ್ ಫಾರೂಕ್ ಚಲಾಯಿಸಿದ್ದನು.
ಅದಕ್ಕೆ ಸಂಬAಧಿಸಿ ಆರೋಪಿಗಳನ್ನು ಪೊಲೀಸರು ಹೊಸದುರ್ಗ ರೈಲು ನಿಲ್ದಾಣ ಮತ್ತು ಪರಿಸರ ಪ್ರದೇಶಗಳಿಗೂ ಸಾಗಿಸಿ ಅಲ್ಲಿಂದಲೂ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ದರೋಡೆಗೈಯ್ಯುವ ಸಂಚಿಗೆ ಆರೋಪಿಗಳು ಘಟನೆ ನಡೆದ ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಿಕೊಂಡಿದ್ದರೆAಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ದರೋಡೆಗೈದ ಹಣದೊಂದಿಗೆ ಅವರು ನಂತರ ತಮ್ಮ ಊರಿಗೆ ಪರಾರಿಯಾಗುವ ತೀರ್ಮಾನವನ್ನು ಕೈಗೊಂಡಿದ್ದರ. ಆರೋಪಿಗಳನ್ನು ಇಂದು ಪುನಃ ನ್ಯಾಯಾಲಯಕ್ಕೆ ಹಾಜರುಪಡಿ ಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page