ಕ್ರಿಸ್ಮಸ್ ಋತು: ರಾಜ್ಯದಲ್ಲಿ ೨೩೦.೪೭ ಕೋಟಿ ರೂ.ಗಳ ದಾಖಲೆ ಮದ್ಯ ಮಾರಾಟ

ಕಾಸರಗೋಡು: ಕ್ರಿಸ್ಮಸ್ ಉತ್ಸವ ಋತು ಆರಂಭಗೊಂಡ ಬಳಿಕದ ಕಳೆದ ಮೂರು ದಿನಗಳಲ್ಲಾಗಿ ರಾಜ್ಯ ಬಿವರೇಜ್ ಕಾರ್ಪರೇಶನ್‌ನ ಚಿಲ್ಲರೆ ಮದ್ಯ ಮಾರಾಟದಂಗಡಿಗಳಲ್ಲಾಗಿ ಒಟ್ಟು ೨೩೦.೪೭ ಕೋಟಿ ರೂ.ಗಳ ದಾಖಲೆಯ ಮದ್ಯ ಮಾರಾಟವಾ ಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೨೧೦.೩೫ ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಕ್ರಿಸ್ಮಸ್‌ನ ಹಿಂದಿನ ದಿನವಾದ ಭಾನುವಾರ ದಂದು ಮಾತ್ರವಾಗಿ ೭೦.೭೩ ಕೋಟಿ ರೂ.ಗಳ  ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ದಿನ ೬೯.೫೫ ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಡಿ. ೨೨ರಂದು ೭೫.೭೦ ಕೋಟಿ ರೂ. ಮದ್ಯ ಮಾರಾಟವಾದರೆ, ಕಳೆದ ಡಿ. ೨೨ರಂದು ೬೯.೫೫ ಕೋಟಿ ರೂ. ಮದ್ಯ ಮಾರಾಟವಾಗಿತ್ತು.

ಡಿ. ೨೩ರಂದು ೮೪.೦೪ ಕೋಟಿ ರೂ.ಗಳ ಮದ್ಯ ಮಾರಾಟವಾದರೆ ಅದು ಕಳೆದ ವರ್ಷ ಡಿ. ೨೩ರಂದು ೭೫.೪೧ ಕೋಟಿ ರೂ.ಗಳ ಮದ್ಯ ಮಾರಾಟ ನಡೆದಿತ್ತು. ಈ ವರ್ಷ ಚಾಲಕುಡಿಯಲ್ಲಿ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಎಂಬಂತೆ ೬೩.೮೫ ಲಕ್ಷ ರೂ.ಗಳ ಮದ್ಯ ಮಾರಾಟವಾಗಿದೆ. ೬೨.೮೭ ಲಕ್ಷ ರೂ.ಗಳ ಮದ್ಯ ಮಾರಾಟವಾದ ಚೆಂಗನಾಶ್ಶೇರಿ ದ್ವಿತೀಯ ಸ್ಥಾನದಲ್ಲಿದ್ದರೆ, ೬೨.೩೧ ಲಕ್ಷ ರೂ.ಗಳ ಮದ್ಯ ಮಾರಾಟವಾದ ಇರಿಞಾಲ್‌ಕುಡ ಮೂರನೇ ಸ್ಥಾನದಲ್ಲಿದೆ.

RELATED NEWS

You cannot copy contents of this page