ಕ್ರಿಸ್ಮಸ್ ಬಂಪರ್: ದ್ವಿತೀಯ ಬಹುಮಾನ ಕುಂಬಳೆಗೆ

ಕುಂಬಳೆ: ನಿನ್ನೆ ಡ್ರಾ ನಡೆದ ಕೇರಳ ಸರಕಾರದ ಕ್ರಿಸ್ಮಸ್-ನ್ಯೂ ಇಯರ್ ಲಾಟರಿಯ ದ್ವಿತೀಯ ಬಹುಮಾನವಾದ ೧ ಕೋಟಿ ರೂಪಾಯಿ ಕುಂಬಳೆಯಲ್ಲಿ  ಮಾರಾಟವಾದ ಟಿಕೆಟ್‌ಗೆ ಲಭಿಸಿದೆ. ಕುಂಬಳೆ ಬಸ್ ನಿಲ್ದಾಣದಲ್ಲಿರುವ ಮಂಜುನಾಥ ಸ್ವಾಮಿ ಲಾಟರಿ ಏಜೆನ್ಸಿಯಿಂದ ಮಾರಾಟವಾದ x173582 ನಂಬ್ರದ ಟಿಕೆಟ್‌ಗೆ ಬಹುಮಾನ ಲಭಿಸಿದೆ. ಇತ್ತೀಚೆಗೆ ಕಣಿಪುರ ಕ್ಷೇತ್ರ ಜಾತ್ರೆ ಸಂದರ್ಭದಲ್ಲಿ ಈ ಟಿಕೆಟ್ ಮಾರಾಟವಾಗಿದ್ದು, ಆದರೆ ಬಹುಮಾನ ಲಭಿಸಿದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲವೆಂದು ಲಾಟರಿ ಏಜೆಂಟ್ ರಾಮಚಂದ್ರ ಮಣಿಯಾಣಿ ತಿಳಿಸಿದ್ದಾರೆ.

You cannot copy contents of this page