ಕ್ರೀಡಾ ತರಬೇತಿಗೆ ತಲುಪಿದ ಬಾಲಕಿಯ ಮಾನಭಂಗಕ್ಕೆತ್ನ

ಕಣ್ಣೂರು: ಟರ್ಫ್‌ನಲ್ಲಿ ಕ್ರೀಡಾ ತರಬೇತಿಗೆ ತಲುಪಿದ ೧೬ರ ಹರೆಯದ ಬಾಲಕಿಯನ್ನು ಮಾನಭಂಗ ಪಡಿಸಲು ಯತ್ನಿಸಿರು ವುದಾಗಿ ದೂರಲಾಗಿದೆ. ಟರ್ಫ್ ಕ್ರೀಡಾಂಗಣದ ಕಾರ್ಮಿಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ತಲಶ್ಶೇರಿ ಲೋಟಸ್ ಟಾಕೀಸ್ ಸಮೀಪದ  ರಾಹಿದ್(೩೯) ವಿರುದ್ಧ ತಲಶ್ಶೇರಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಇತ್ತೀಚೆಗೆ ತಲಶ್ಶೇರಿ ಸ್ಟೇಡಿಯಂ ಸಮೀಪದಲ್ಲಿ ಘಟನೆ ನಡೆದಿದೆ. ಟರ್ಫ್‌ನಲ್ಲಿ ತರಬೇತಿ ನಡೆಯುತ್ತಿದ್ದ ವೇಳೆ ಬಾಲಕಿಯ ಸಮೀಪಕ್ಕೆ ಬಂದ ರಾಹಿದ್ ಕೈ ಹಿಡಿದು ಮಾನಭಂಗ ಯತ್ನ ನಡೆಸಿದ್ದನೆನ್ನಲಾಗಿದೆ. ಬಾಲಕಿ ಬೊಬ್ಬೆ ಹೊಡೆದ ಹಿನ್ನೆಲೆಯಲ್ಲಿ ಇತರರು ಗಮನಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

You cannot copy contents of this page