ಕ್ವಾರ್ಟರ್ಸ್ ಬಾಗಿಲು ಮುರಿದು ಚಿನ್ನಾಭರಣ, ಹಣ ಕಳವು

ಮುಳ್ಳೇರಿಯ: ಕ್ವಾರ್ಟರ್ಸ್‌ನ ಬಾಗಿಲು ಮುರಿದು ಒಳ ನುಗ್ಗಿದಕಳ್ಳರು ಕಪಾಟಿನಲ್ಲಿದ್ದ ಒಂದುಕಾಲು ಪವನ್ ಚಿನ್ನಾಭರಣ ಹಾಗೂ 25,೦೦೦ ರೂಪಾಯಿಗಳನ್ನು ದೋಚಿರುವುದಾಗಿ ದೂರಲಾಗಿದೆ. ಬೋವಿಕ್ಕಾನ ತೇಜಸ್ ಕಾಲನಿಯ ಕಿರಣ್ ಕುಮಾರ್‌ರ ಪತ್ನಿ ಶ್ರೀವಿದ್ಯಾ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು  ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶ್ರೀವಿದ್ಯಾ ಹಾಗೂ ಕುಟುಂಬ ಬೋವಿಕ್ಕಾನದ ತೇಜಸ್ ಕಾಲನಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.  ಪತಿ ಕಿರುಣ್ ಕುಮಾರ್ ಅಸೌಖ್ಯ ಬಾಧಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದಾರೆ.  ಆದ್ದರಿಂದ ಶ್ರೀವಿದ್ಯಾ ಕ್ವಾರ್ಟರ್ಸ್‌ಗೆ ಬೀಗ ಜಡಿದು  ಪತಿಯೊಂದಿಗೆ ಆಸ್ಪತ್ರೆಯಲ್ಲಿದ್ದಾರೆ. ಪ್ಲಸ್‌ಟು ವಿದ್ಯಾರ್ಥಿಯಾದ ಪುತ್ರ ಮಧೂರಿನ ಸಂಬಂಧಿಕರ ಮನೆಯ ಲ್ಲಿದ್ದಾನೆ. ಮೇ 11ರಂದು ಕ್ವಾರ್ಟ ರ್ಸ್‌ನ ಬಾಗಿಲು ತೆರೆದಿಟ್ಟಿರುವುದನ್ನು ಕಂಡ ನೆರೆಮನೆ ನಿವಾಸಿಗಳು ಶ್ರೀವಿದ್ಯಾರಿಗೆ ವಿಷಯ ತಿಳಿಸಿದ್ದರು.  ಬಳಿಕ ಶ್ರೀವಿದ್ಯಾ ತಲುಪಿ ಪರಿಶೀ ಲಿಸಿದಾಗ ಕ್ವಾರ್ಟ ರ್ಸ್‌ನೊಳಗಿರುವ ಕಪಾಟಿನಲ್ಲಿರಿಸಿದ್ದ ಒಂದೂಕಾಲು ಪವನ್‌ನ ಬೆಂಡೋಲೆ ಹಾಗೂ 25 ಸಾವಿರ ರೂಪಾಯಿ ಕಳವಿಗೀಡಾಗಿ ರುವುದು ತಿಳಿದುಬಂದಿದೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page