ಖಾಸಗಿ ಬಸ್ ಮುಷ್ಕರದಿಂದ ಹಿಂದಕ್ಕೆ ಸರಿದ ಒಂದು ವಿಭಾಗ
ತಿರುವನಂತಪುರ: ಜುಲೈ 22ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವ ತೀರ್ಮಾನದಿಂದ ಖಾಸಗಿ ಬಸ್ ಮಾಲಕ ಸಂಘಟನೆಗಳ ಒಂದು ವಿಭಾಗ ಹಿಂದಕ್ಕೆ ಸರಿದಿವೆ.
ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಖಾಸಗಿ ಬಸ್ ಮಾಲಕರ ಸಂಘಟನೆಗಳೊಂದಿಗೆ ನಿನ್ನೆ ನಡೆಸಿದ ಚರ್ಚೆಯಲ್ಲಿ ಮುಷ್ಕರದಿಂದ ಹಿಂದಕ್ಕೆ ಸರಿಯಲು ಖಾಸಗಿ ಬಸ್ ಮಾಲಕರ ಸಂಘಟನೆಗಳ ಒಂದು ವಿಭಾಗವಾದ ಬಸ್ ಆಪರೇಟರ್ಸ್ ಫಾರಂ ತೀರ್ಮಾನಿಸಿದೆ.
ಖಾಸಗಿ ಬಸ್ ಮಾಲಕರ ಸಂಘ ಟನೆಗಳು ಮುಂದಿರಿಸಿರುವ ಬೇಡಿಕೆಗಳು ಶೇ. 99 ನ್ಯಾಯಯುತವೇ ಆಗಿದೆ ಎಂದು ಚರ್ಚೆಯಲ್ಲಿ ಸಚಿವರು ತಿಳಿಸಿದ್ದಾರೆ. ಬಸ್ಸುಗಳ ಬಿಡಿ ಭಾಗ ಇತ್ಯಾದಿಗಳ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಯಾಣ ದರ ಏರಿಸಬೇಕು ಎಂಬ ಬೇಡಿಕೆಯನ್ನು ಬಸ್ ಮಾಲಕರು ಮುಂದಿರಿಸಿರುವುದ ರಲ್ಲಿ ತಪ್ಪಿಲ್ಲ. ಈ ಬಗ್ಗೆ ವಿದ್ಯಾರ್ಥಿ ಸಂಘಟನೆಗಳ ಜತೆ ರಾಜ್ಯ ಸಾರಿಗೆ ಸಚಿವರು ಚರ್ಚೆ ನಡೆಸುವರು. ಆ ಬಳಿಕ ಈ ವಿಷಯದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ವಿದ್ಯಾರ್ಥಿಗಳ ಪ್ರಯಾಣದರ ದಲ್ಲಿ ಅಲ್ಪ ಹೆಚ್ಚಳ ತರುವಂತೆ ರವಿ ರಾಮನ್ ಆಯೋಗ ಮಾಡಿರುವ ಶಿಫಾರಸ್ಸು ವರದಿಯ ಆಧಾರದಲ್ಲಿ ಈ ಚರ್ಚೆ ನಡೆಯಲಿದೆ. ಚರ್ಚೆಯಲ್ಲಿ ಹೊಂದಾಣಿಕೆಗೆ ಬರುವ ನಿರೀಕ್ಷೆ ಇದೆ ಎಂದೂ ಸಚಿವರು ತಿಳಿಸಿದ್ದಾರೆ.
ಆದರೆ ಕೇರಳ ಬಸ್ ಆಪರೇಟರ್ಸ್ ಫೆಡರೇಷನ್, ಬಸ್ ಆಪರೇಟರ್ಸ್ ಆರ್ಗನೈಸೇಷನ್ ಮತ್ತು ಕೇರಳ ಬಸ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ಬಸ್ ಮುಷ್ಕರ ತೀರ್ಮಾನದಲ್ಲಿ ಇನ್ನೂ ಅಚಲವಾಗಿ ಉಳಿದುಕೊಂಡಿದೆ. ಈ ಸಂಘಟನೆಗಳ ಮನವೊಲಿಸಿ ಮುಷ್ಕರದಿಂದ ಹಿಂದಕ್ಕೆ ಸರಿಯುವಂತೆ ಮಾಡುವ ಪ್ರಯತ್ನವೂ ಇನ್ನೊಂದೆಡೆ ನಡೆಯುತ್ತಿದೆ. ವಿದ್ಯಾರ್ಥಿ ಗಳ ಬಸ್ ಪ್ರಯಾಣ ರಿಯಾಯಿತಿ ದರ ಹೆಚ್ಚಿಸಬೇಕು, ೧೪೦ ಕಿ.ಮೀ.ಗಿಂತಲೂ ದೀರ್ಘದ ರೂಟ್‌ನಲ್ಲಿ ಸೇವೆ ನಡೆಸುತ್ತಿರುವ ಖಾಸಗಿ ಬಸ್‌ಗಾಗಿರುವ ಪರ್ಮಿಟನ್ನು ನವೀಕರಿಸಬೇಕು ಎಂಬು ವುದು ಬಸ್ ಮಾಲಕರ ಮುಂದಿರಿಸಿರುವ ಪ್ರಧಾನ ಬೇಡಿಕೆಗಳಾಗಿವೆ.