ಖ್ಯಾತ ಮಲೆಯಾಳ ಸಿನಿಮಾ ನಟ ರವಿ ಕುಮಾರ್ ನಿಧನ


ಚೆನ್ನೈ: 1970 ಮತ್ತು 80ರ ಅವಧಿಯಲ್ಲಿ ಮಲೆಯಾಳಂ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಹಿರಿಯ ನಾಯಕನಟ ರವಿ ಕುಮಾರ್ (71) ನಿಧನಹೊಂದಿದರು. ಇವರು ಅರ್ಬುದ ರೋಗದ ನಿಮಿತ್ತ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿ ದ್ದರು. ಅದು ಫಲಕಾರಿಯಾಗದೆ ನಿನ್ನೆ ನಿಧನಹೊಂದಿದರು.
ತೃಶೂರು ನಿವಾಸಿಯಾದ ಕೆ.ಎಂ.ಕೆ. ಮೆನೋನ್-ಆರ್. ಭಾರತಿ ದಂಪತಿ ಪುತ್ರನಾಗಿ 1954ರಲ್ಲಿ ಜನಿಸಿದ ರವಿ ಕುಮಾರ್ ನೂರಕ್ಕೂ ಹೆಚ್ಚು ಮಲೆ ಯಾಳಂ ಸಿನಿಮಾದಲ್ಲಿ ಅಭಿನಯಿಸಿ ದ್ದರು. 1967ರಲ್ಲಿ ತೆರೆಕಂಡ ‘ಇಂಧುಲೇಖ’ ಎಂಬ ಚಿತ್ರz ಮೂಲಕ ಇವರು ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು. ನಟ ಮೋಹನ್ ಲಾಲ್ ನಾಯಕನಾಗಿ ನಟಿಸಿದ ಆರಾಟ್ ಮತ್ತು ಮಮ್ಮುಟ್ಟಿ ಜತೆ ಸಿಬಿಐ 5 ರಲ್ಲಿ ಕೊನೆಯದಾಗಿ ಅಭಿನಯಿಸಿದ್ದರು.
ಮೃತರು ಪತ್ನಿ ರಾಣಿ ರವಿಕುಮಾರ್, ಮಗ ವಸಂತ್ ಮೆನೋನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಂತ್ಯಸAಸ್ಕಾರ ಇಂದು ಚೆನ್ನೈಯಲ್ಲಿ ನಡೆಯಲಿದೆ.

You cannot copy contents of this page