ಗಲ್ಲುಶಿಕ್ಷೆ ವಿಧಿಸಲ್ಪಟ್ಟು ಯೆಮನ್ ಜೈಲ್‌ನಲ್ಲಿರುವ ಪಾಲಕ್ಕಾಡ್ ನಿವಾಸಿ ಯುವತಿಯನ್ನು 12 ವರ್ಷ ಬಳಿಕ ಭೇಟಿಯಾದ ತಾಯಿ

ಪಾಲಕ್ಕಾಡ್: ವ್ಯಕ್ತಿಯೋರ್ವ ನನ್ನು ಕೊಲೆಗೈದ ಆರೋಪದಂತೆ ಗಲ್ಲುಶಿಕ್ಷೆ ವಿಧಿಸಲ್ಪಟ್ಟು ಯೆಮನ್‌ನ ಜೈಲಿನಲ್ಲಿರುವ ಪಾಲಕ್ಕಾಡ್ ನಿವಾಸಿ ನಿಮಿಷಪ್ರಿಯ ಎಂಬ ಯುವತಿಯನ್ನು ತಾಯಿ ಪ್ರೇಮ ಕುಮಾರಿಗೆ ಕೊನೆಗೂ ಭೇಟಿಯಾಗಲು ಸಾಧ್ಯವಾಯಿತು. ಯೆಮನ್ ರಾಜಧಾನಿಯಾದ ಸನದ  ಜೈಲಿನಲ್ಲಿರುವ  ನಿಮಿಷಪ್ರಿಯಳನ್ನು ತಾಯಿ   ಭೇಟಿಯಾದರು. ಸುದೀರ್ಘ 12 ವರ್ಷಗಳ ನಂತರ ತಾಯಿ, ಮಗಳ ಭೇಟಿ ನಡೆದಿದೆ. ಗಂಟೆಗಳ ಕಾಲ ಇವರಿಗೆ ಸಮಾಲೋಚನೆ ನಡೆಸಲು, ಒಟ್ಟಿಗೆ ಆಹಾರ ಸೇವಿಸಲು  ಜೈಲು ಅಧಿಕಾರಿಗಳು ಅನುಮತಿ ನೀಡಿದರು.

ಕೊಲೆಗೀಡಾದ ಯೆಮನ್ ಪ್ರಜೆಯ ಕುಟುಂಬವನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆ ನಡೆಸಲಿರುವ  ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕಂಡುಕೊಳ್ಳಲಾಗುವುದು.

ಯೆಮನ್‌ನ ಕಾನೂನು ಪ್ರಕಾರ  ಕೊಲೆಗೀಡಾದ ವ್ಯಕ್ತಿಯ ಕುಟುಂಬ ಕ್ಷಮೆ ನೀಡಿದರೆ ಆರೋಪಿಗೆ ಶಿಕ್ಷೆಯಲ್ಲಿ ರಿಯಾಯಿತಿ ಲಭಿಸುವು ದು. ಕೊಲೆಗೀಡಾದ ಸಲಾಲ್ ಅಬ್ದುಮಹದಿ ಎಂಬವರ ಕುಟುಂಬ ಚರ್ಚೆಗೆ ಸಿದ್ಧವಿದೆಯೆಂದೂ, ಅದಕ್ಕಾಗಿ ೫೦ ದಶಲಕ್ಷ ಯೆಮನ್ ರಿಯಾಲ್ (ಸುಮಾರು ೧.೫ ಕೋಟಿ ರೂಪಾಯಿ) ನಷ್ಟ ಪರಿಹಾರ ನೀಡಬೇಕಾಗಿ ಬರಲಿದೆ ಎಂದು ತಿಳಿಸಲಾಗಿದೆ.

ಪ್ರೇಮ ಕುಮಾರಿ ಮಾನವ ಹಕ್ಕು ಕಾರ್ಯಕರ್ತ ಸಾಮುವಲ್ ಜೆರೋಂ ಮೂಲಕ ಯೆಮನ್‌ಗೆ ತೆರಳಿ ಮಗಳನ್ನು ಕಂಡಿದ್ದಾರೆ.

ಯೆಮನ್ ಪ್ರಜೆ ತಲಾಲ ಅಬ್ದುಮಹ್‌ದಿ ಕೊಲೆಗೀಡಾದ ಪ್ರಕರಣದಲ್ಲಿ  ಪಾಲಕ್ಕಾಡ್ ಕೊಲ್ಲಂ ಕೋಡ್  ನಿವಾಸಿ ನಿಮಿಷಪ್ರಿಯಳಿಗೆ ಅಲ್ಲಿನ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.  ಈ ಹಿನ್ನೆಲೆಯಲ್ಲಿ  ನಿಮಿಷ ಪ್ರಿಯಾಳನ್ನು ಜೈಲಿನಲ್ಲಿರಿಸಲಾಗಿದೆ.

೨೦೧೭ರಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಯೆಮನ್‌ನಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಿಮಿಷಪ್ರಿಯಳಿಗೆ ಕ್ಲಿನಿಕ್ ಆರಂಭಿಸಲು ಸಹಾಯವೊದಗಿಸುವುದಾಗಿ ತಿಳಿಸಿದ ತಲಾಲ್‌ಅಬ್ದುಮಹ್‌ದಿ ಆಕೆಯ ಪಾಸ್ ಪೋರ್ಟ್ ಹಿಡಿದಿಡಲು ಯತ್ನಿಸಿದ್ದನೆನ್ನಲಾಗಿದೆ. ಇದು ಅವರೊಳಗೆ ಕಲಹಕ್ಕೆ ಕಾರಣವಾಗಿದ್ದು, ಅದರ ಮುಂದುವರಿಕೆಯಾಗಿ ಕೊಲೆ ನಡೆದಿರುವುದಾಗಿ ಹೇಳಲಾಗುತ್ತಿದೆ.

You cannot copy contents of this page