ಗಾಂಜಾ ಸಹಿತ ಇಬ್ಬರ ಸೆರೆ
ಉಪ್ಪಳ: ಮಂಜೇಶ್ವರ ಪೊಲೀಸರು ನಿನ್ನೆ ಸಂಜೆ ಕಾರ್ಯಾಚರಣೆ ನಡೆಸಿ ಗಾಂಜಾ ಕೈವಶವಿರಿಸಿಕೊಂಡಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿಗಳಾದ ಇಸ್ಮಾಯಿಲ್ (36), ಸೈದು ಸೂಸನ್ (25) ಎಂಬಿವರನ್ನು ಬಂಧಿಸಲಾಗಿದೆ. ಇಸ್ಮಾಯಿಲ್‌ನ ಕೈಯಿಂದ 6.70 ಗ್ರಾಂ, ಸೈದುಸೂಸನ್‌ನ ಕೈಯಿಂದ 12 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ಎಸ್‌ಐ ರತೀಶ್‌ಗೋಪಿ ನೇತೃತ್ವದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಂಶಯಾಸ್ಪದವಾಗಿ ಕಂಡುಬಂದ ಈ ಇಬ್ಬರನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.