ಗೂಗಲ್ ಮ್ಯಾಪ್ ನೋಡಿ ಸಂಚಾರ: ಹೊಳೆಗೆ ಬಿದ್ದ ಕಾರಿನಲ್ಲಿದ್ದ ಐದು ಮಂದಿ ಪಾರು

ತೃಶೂರು: ತಿರುವಿಲ್ಲಾ ಮಲದಲ್ಲಿ ಗೂಗಲ್ ಮ್ಯಾಪ್ ನೋಡಿ ಸಂಚರಿಸುತ್ತಿದ್ದ ಕಾರು ಹೊಳೆಗೆ ಬಿದ್ದಿದೆ. ಕಾರಿನಲ್ಲಿದ್ದ ಐದು ಮಂದಿಯ ತಂಡ ಆಶ್ಚರ್ಯಕರವಾಗಿ ಪಾರಾಗಿದೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಮಲಪ್ಪುರಂ ಕೋಟೆಕ್ಕಲ್ ಚೆಂಗೋಟೂರು ನಿವಾಸಿ ಬಾಲಕೃಷ್ಣನ್ ಹಾಗೂ ಕುಟುಂಬ ಕಾರಿನಲ್ಲಿ  ಸಂಚರಿಸಿದೆ.

ಮನೆಗೆ ಹಿಂತಿರುಗುತ್ತಿದ್ದ ಮಧ್ಯೆ ಅಪಘಾತ ಉಂಟಾಗಿದ್ದು, ಗಾಯತ್ರಿ ಹೊಳೆಗೆ ಅಡ್ಡವಾಗಿ ಕೊಂಡಾಳಿ ತಿರುವಿಲ್ಲಾಮಲ ಪಂಚಾಯತ್ ಗಳನ್ನು ಜೋಡಿಸುವ ಎಳುನಲ್ಲತ್ ಕಡವು ಅಣೆಕಟ್ಟಿನಲ್ಲಿ ಅಪಘಾತ ಸಂಭವಿಸಿದೆ. ರಾತ್ರಿ ಗೂಗಲ್ ಮ್ಯಾಪ್ ನೋಡಿ ಅಣೆಕಟ್ಟಿನ ಮೂಲಕ ಕಾರು ಮುಂದೆ ಸಾಗುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಹೊಳೆಗೆ ಕಾರು ಬಿದ್ದಿದೆ. ಸ್ಥಳೀಯರು ಇವರನ್ನು ಪಾರುಮಾಡಿದ್ದಾರೆ.

RELATED NEWS

You cannot copy contents of this page