ಗೂಡಂಗಡಿಗೆ ನುಗ್ಗಿದ ಲಾರಿ: ೫ ಮಂದಿ ಅಯ್ಯಪ್ಪ ವ್ರತಧಾರಿಗಳು ಮೃತ್ಯು

ಚೆನ್ನೈ: ತಮಿಳುನಾಡು ಪುದುಕೋಟೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ೫ ಮಂದಿ ಅಯ್ಯಪ್ಪ ವ್ರತಧಾರಿಗಳು ಮೃತಪಟ್ಟರು. ನಿಯಂತ್ರಣ ತಪ್ಪಿದ ಲಾರಿ ಚಹದಂಗಡಿಗೆ ನುಗ್ಗಿದ್ದು, ಅಪಾಯಕ್ಕೆ ಕಾರಣವಾಗಿದೆ. ೧೯ ಮಂದಿಗೆ ಘಟನೆಯಲ್ಲಿ ಗಾಯ ಉಂಟಾಗಿದೆ. ಮುಂಜಾನೆ ವೇಳೆ  ಚಹ ಕುಡಿಯಲೆಂದು ವಾಹನವನ್ನು ನಿಲ್ಲಿಸಿ ರಸ್ತೆ ಬದಿಯ ಗೂಡಂಗಡಿಗೆ ತೆರಳಿದ್ದರು. ಈ ವೇಳೆ ಸಿಮೆಂಟು ಲಾರಿಯೊಂದು ನಿಯಂತ್ರಣ ತಪ್ಪಿ ವಾಹಗಳಿಗೆ  ಢಿಕ್ಕಿ ಹೊಡೆದ ಗೂಡಂಗಡಿಗೆ ನುಗ್ಗಿದೆ. ಪೊಲೀಸರು, ಅಗ್ನಿಶಾಮಕದಳ ತಲುಪಿ ಸಾಹಸದಿಂದ ಲಾರಿಯನ್ನು ಮುರಿದು ತೆಗೆದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED NEWS

You cannot copy contents of this page