ಗೃಹಿಣಿ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ನೀರ್ಚಾಲು: ಗೃಹಿಣಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೇಳ ಕುಮಾರಮಂಗಲ ದೇವಸ್ಥಾನ ಬಳಿಯ ನಿವಾಸಿ ವಾಸುದೇವ ಆಸ್ರರ ಪತ್ನಿ ಸವಿತಾ (43) ಸಾವಿಗೀಡಾದ ಗೃಹಿಣಿ. ನಿನ್ನೆ ಸಂಜೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಸಾವು ಸಂಭವಿಸಿರು ವುದಾಗಿ ಖಚಿತಪಡಿಸಲಾಗಿದೆ.

ಪತಿ ವಾಸುದೇವ ಆಸ್ರರು ತುರ್ತು ಕಾರ್ಯದ ನಿಮಿತ್ತ ನಿನ್ನೆ ಮಧ್ಯಾಹ್ನ  ಬೇರೆಡೆಗೆ ತೆರಳಿದ್ದರು. ಈ ವೇಳೆ ಸವಿತಾ ಮಾತ್ರ ಮನೆಯಲ್ಲಿದ್ದರು. ಸಂಜೆ ೪.೩೦ರ ವೇಳೆ ಶಾಲೆ ಬಿಟ್ಟು ಮಕ್ಕಳು ಮನೆಗೆ ತಲುಪಿದಾಗ ಬಾಗಿಲು ಮುಚ್ಚಿಕೊಂ ಡಿತ್ತು. ಒಳಗಿನಿಂದ ಚಿಲಕ ಹಾಕಿದ್ದು, ತಾಯಿಯನ್ನು ಕರೆದರೂ ಪ್ರತಿಕ್ರಿಯೆ ಉಂಟಾಗಿಲ್ಲ. ವಿಷಯ ತಿಳಿದು ನೆರೆಮನೆಯವರು ತಲುಪಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಸವಿತಾ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆನ್ನಲಾಗಿದೆ. ಇವರು ನೇಣು ಹಾಕಲು ಕಾರಣವೇನೆಂದು ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಜನರಲ್ ಆಸ್ಪತ್ರೆಯಲ್ಲಿ ನಡೆಯಲಿದೆ.

ವಾಣಿನಗರ ಉಕ್ಕುಮೂಲೆ ನಿವಾಸಿ ವೆಂಕಟ್ರಮಣ ಹೊಳ್ಳ-ಜಲಜಾ ದಂಪತಿಯ ಪುತ್ರಿಯಾದ ಸವಿತಾ ಪತಿ, ಮಕ್ಕಳಾದ ಅನಘ (ಪೆರ್ಲ ನಲಂದಾ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿ), ಅನುಷ, ಅನನ್ಯ (ನೀರ್ಚಾಲು ಎಂಎಸ್‌ಸಿಎಚ್‌ಎಸ್  ವಿದ್ಯಾರ್ಥಿನಿ ಯರು), ಸಹೋದರ ಗಣೇಶ ಹೊಳ್ಳ, ಸಹೋದರಿಯರಾದ ಸಂಧ್ಯಾ, ಕಸ್ತೂರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page