ಗೆಳೆಯನ ಬರ ಹೇಳಿ ಇರಿದು ಕೊಲೆ

ಕಣ್ಣೂರು: ಗೆಳೆಯನನ್ನು ಬರಹೇಳಿ ಇರಿದು ಕೊಲೆಗೈದ ಘಟನೆ ಆಲಕ್ಕೋಡ್‌ನಲ್ಲಿ ಸಂಭವಿಸಿದೆ. ಇಲ್ಲಿನ ಅರಂಗವಟ್ಟಿಕ್ಕಯದ ಮ್ಯಾಥ್ಯೂ ಹಾಗೂ ದಿ| ವಲ್ಸಮ್ಮ ದಂಪತಿ ಪುತ್ರ ಜೋಶಿ ಮ್ಯಾಥ್ಯು (೩೫)ನನ್ನು ಗೆಳೆಯ ಜಯೇಶ್ ಕೊಲೆ ಗೈದಿದ್ದಾನೆ. ನಿನ್ನೆ ರಾತ್ರಿ ೧೧ ಗಂಟೆಗೆ ಹತ್ಯೆಗೈಯ್ಯಲಾಗಿದೆ. ಇವರಿಬ್ಬರ ಮಧ್ಯೆ ಉಂಟಾಗಿದ್ದ ವೈಮನಸ್ಸನ್ನು ಮಾತುಕತೆಯಲ್ಲಿ ಬಗೆಹರಿಸುವ ಎಂದು ಹೇಳಿ ಗೆಳೆಯನನ್ನು ದೀಪಾ ಆಸ್ಪತ್ರೆಯ ಸಮೀಪದ ಪಾರ್ಕಿಂಗ್ ಪ್ಲಾಜಾಕ್ಕೆ ಗೆಳೆಯ ಬರಹೇಳಿದ್ದನು. ಮಾತುಕತೆ ವೇಳೆ ಕೋಪಗೊಂಡ ಗೆಳೆಯ ಮೋರಾನಿ ನಿವಾಸಿ ಜಯೇಶ್ (೩೯) ಜೋಷಿಗೆ ಇರಿದಿದ್ದಾನೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.

You cannot copy contents of this page