ಚಿಕಿತ್ಸೆ ಮಧ್ಯೆ ವಿದ್ಯಾರ್ಥಿನಿಯ ಮರಣ: ಸಮಗ್ರ ತನಿಖೆಗೆ ಸಿಪಿಎಂ ಆಗ್ರಹ

ಕಾಸರಗೋಡು:  ಬಾರ ತೊಟ್ಟಿ ನಿವಾಸಿ ಹುಸೈನ್‌ರ ಪುತ್ರಿ ಪ್ಲಸ್‌ವನ್ ವಿದ್ಯಾರ್ಥಿನಿಯಾಗಿದ್ದ ರಮೀಸ ತಸ್ಲೀಂ ಚಿಕಿತ್ಸೆ ಮಧ್ಯೆ ಮೃತ ಪಟ್ಟಿರುವುದು ಆಸ್ಪತ್ರೆ ಅಧಿಕಾರಿಗಳ ಅನಾಸ್ಥೆಯಿಂದ ಎಂದು ಸಿಪಿಎಂ ಉದುಮ ಏರಿಯಾ ಸಮಿತಿ ಆರೋ ಪಿಸಿದೆ. ಕಳೆದ ನಾಲ್ಕು ತಿಂಗಳ ಮಧ್ಯೆ ಈಕೆಯ  ಚಿಕಿತ್ಸಾ ಸಂದರ್ಭ ದಲ್ಲೇ ಇತರ ನಾಲ್ಕು ಮಂದಿ ಕೂಡಾ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಇದು ಗಂಭೀರವಾದ ವಿಷಯವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪಕ್ಷ ಆಗ್ರಹಿಸಿದೆ. ಈ ರೀತಿಯ ಕಾರ್ಯಗಳು ಪುನರಾವರ್ತಿಸದಿರಲು ಸರಕಾರ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಏರಿಯಾ ಸಮಿತಿ ಆಗ್ರಹಿಸಿದೆ.

You cannot copy contents of this page