ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿದ್ದ ಸಿಬ್ಬಂದಿ ಕಾರು ಢಿಕ್ಕಿ ಹೊಡೆದು ಸಾವು

ಕಾಯಂಕುಳಂ: ಚುನಾವಣಾ ಕರ್ತವ್ಯಕ್ಕಾಗಿ ಬೈಕ್‌ನಲ್ಲಿ ಹೋಗು ತ್ತಿದ್ದ ಸಿಬ್ಬಂದಿ ಕಾರು ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾಯಂಕುಳಂನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಕಾಯಂಕುಳಂನಲ್ಲಿ ಪುಲ್ಲುಕುಳಂ ಗರೆ ನಿವಾಸಿ ಭೂಕಂದಾಯ ಇಲಾಖೆಯ ಸಿಬ್ಬಂದಿ ಬಾಬು (೪೨) ಸಾವನ್ನಪ್ಪಿದ ದುರ್ದೈವಿ. ಇವರು ಚುನಾವಣಾ ಕರ್ತವ್ಯಕ್ಕಾಗಿ ಇಂದು ಬೆಳಿಗ್ಗೆ ಬೈಕ್‌ನಲ್ಲಿ  ಕಾಯಂಕುಳಂ ಎಂ.ಎಸ್.ಎಂ ಕಾಲೇಜಿಗೆ ಹೋಗುತ್ತಿದ್ದ ದಾರಿ ಮಧ್ಯೆ ಅವರು   ಸಂಚರಿಸುತ್ತಿದ್ದ  ಬೈಕ್‌ಗೆ ಕಾರು ಢಿಕ್ಕಿ ಹೊಡೆದಿದೆ. ಗಂಭೀರಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ  ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

You cannot copy contents of this page