ಜಲಮಟ್ಟ ಪರಿಶೀಲಿಸಲು ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ನಾಳೆ ಕಾಸರಗೋಡಿಗೆ

ಕಾಸರಗೋಡು: ಜಿಲ್ಲೆಯ ಅಂತರ್ಜಲ ಮಟ್ಟದ ಬಗ್ಗೆ ಹಾಗೂ ಭೂಮಿಯಡಿ ನೀರು ಇಂಗಿಸುವಿಕೆಗಾಗಿ ಆರಂಭಿಸಲಾಗಿರುವ ನಿರ್ಮಾಣ ಕೆಲಸಗಳನ್ನು ಪರಿಶೀಲಿಸಲು ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ. ಪಂಕಜ್ ಬಾಕ್ಲೆ ನಾಳೆ ಕಾಸರಗೋಡಿಗೆ ಆಗಮಿಸುವರು. ಇವರು ನಾಳೆ ಮತ್ತು ಗುರುವಾರದಂದು ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಜಿಲ್ಲೆಯ ಅಂತರ್ಜಲ ಕುಸಿದ ಪ್ರದೇಶಗಳಿಗೆ ನೇರವಾಗಿ ಸಂದರ್ಶಿಸಿ ಅದು ಹಾಗೂ ಅಂತರ್ಜಲ ಮಟ್ಟವನ್ನು ಏರಿಸುವಂತೆ ಮಾಡಲು ಕೈಗೊಳ್ಳಲಾದ ನಿರ್ಮಾಣ ಕೆಲಸಗಳನ್ನು ನೇರವಾಗಿ ಪರಿಶೀಲಿಸುವರು.

ಜಿಲ್ಲೆಯಲ್ಲಿ ೬೪೦ ಪ್ರದೇಶಗಳ ಅಂತರ್ಜಲ ಮಟ್ಟ ಕುಸಿದಿರುವುದಾಗಿ ಗುರುತಿಸಲಾಗಿದ್ದು, ಇದನ್ನು ಕೇಂದ್ರ ಸರಕಾರದ ಜೆ.ಎಸ್. ಜೆ.ಪಿ. ಪೋರ್ಟಲ್‌ನಲ್ಲಿ ನೋಂದಾಯಿಸಬೇ ಕಾಗಿದೆ. ಆ ಪೈಕಿ 630 ಪ್ರದೇಶಗಳ ಮಾಹಿತಿಗಳನ್ನು ಪ್ರಸ್ತುತ ಪೋರ್ಟಲ್ ನಲ್ಲಿ ಈಗಾಗಲೇ ನೋಂದಾಯಿಸ ಲಾಗಿದೆ. ಇಂತಹ ಪ್ರದೇಶಗಳಲ್ಲಿ ಜಲ ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗು ತ್ತಿದೆ ಎಂದು ಜಿಲ್ಲಾ ಅಂತರ್ಜಲ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ  ಕಾಸರಗೋಡು ಬ್ಲೋಕ್‌ನಲ್ಲಿರುವ ಕೊಳವೆಬಾವಿಗಳ ಪೈಕಿ 1868 ಕೊಳವೆ ಬಾವಿಗಳನ್ನು ರೀ-ಚಾರ್ಜ್ ಗೊಳಿಸುವ ಯೋಜನೆಗೆ ಮುಂದಿನ ಹತ್ತು ದಿನದೊ ಳಗಾಗಿ ಅಗತ್ಯದ ಕ್ರಮ ಕೈಗೊಳ್ಳಲಾ ಗುವುದೆಂದು ಇವರು ತಿಳಿಸಿದ್ದಾರೆ.

You cannot copy contents of this page