ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತಾ ಅಧ್ಯಯನ ಟೆಂಡರ್‌ಗೆ ಸಚಿವ ಸಂಪುಟದ ಅಂಗೀಕಾರ

ಕಾಸರಗೋಡು: ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಕಿರು ವಿಮಾನ ನಿಲ್ದಾಣ (ಏರ್‌ಸ್ಟ್ರಿಪ್) ಸ್ಥಾಪಿಸುವ ಕುರಿತಾದ ಸಾಧ್ಯತಾ ಅಧ್ಯಯನ ನಡೆಸಲು ರೈಟ್ಸ್-ಕಿಫ್ ಕೋನ್ ಸಲ್ಲಿಸಿದ ಟೆಂಡರ್‌ಗೆ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ತಿರುವನಂತಪುರದಲ್ಲ್ಲಿ ಸೇರಿದ ರಾಜ್ಯ ಸಚಿವ ಸಂಪುಟ ಸಭೆ ಅಂಗೀಕರಿಸಿದೆ.

ಇದರಂತೆ ಸಾರಿಗೆ ಮತ್ತು ಇಂಜಿ ನಿಯರಿಂಗ್ ಸಂಸ್ಥೆಯಾದ ರೈಟ್ಸ್ ಹಾಗೂ ಕಿಫ್‌ಬಿ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ಕನ್ಸಲ್ಟೆನ್ಸಿ ಸಂಸ್ಥೆಯಾದ  ಕಿಫ್‌ಕೋ ಸಂಯುಕ್ತ ವಾಗಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಕುರಿತಾಗಿ ಸಾಧ್ಯತೆ ಅಧ್ಯಯನ ನಡೆಸಲಿದೆ.

ಈ ಮೂರು ಜಿಲ್ಲೆಗಳಲ್ಲಿ ವಿಮಾನ  ಸೇವೆಗೆ ದಾರಿ ಮಾಡಿಕೊಡುವ ಯೋಜನೆಗಳಿಗೆ ರಾಜ್ಯ ಬಜೆಟ್‌ನಲ್ಲಿ ನಿಗದಿತ ಮೊತ್ತ ಮೀಸಲಿರಿಸಲಾಗಿದೆ.

ಈ ಯೋಜನೆ ಪ್ರಕಾರ ಕಾಸರಗೋಡಿನಲ್ಲಿ ಏರ್ ಸ್ಟ್ರಿಫ್‌ಗಳ  ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ರಾಜ್ಯ ಸರಕಾರದ ಈ ಹಿಂದಿನ ಬಜೆಟ್‌ನಲ್ಲಿ  1.50 ಕೋಟಿ ರೂ.ವನ್ನು ಮಂಜೂ ರು ಮಾಡಲಾಗಿತ್ತು. ವಿಮಾನ ನಿಲ್ದಾಣ ಸ್ಥಾಪಿಸಲು ಕನಿಷ್ಠ 1800 ಮೀಟರ್ ಉದ್ದದ ಹಾಗೂ ಇತರ ಅಗತ್ಯಗಳಿ ಗಾಗಿರುವ ಅಗತ್ಯದ ಜಮೀನಿನ ಅಗತ್ಯವಿದೆ. ಆ ಬಗ್ಗೆಯೂ ಅಧ್ಯಯನ ನಡೆಸಲಾಗುವುದು.

RELATED NEWS

You cannot copy contents of this page