ಜಿಲ್ಲೆಯಲ್ಲಿ ವ್ಯಾಪಕಗೊಂಡ ಮಾದಕ ವಸ್ತು ವ್ಯಾಪಾರ: 24.15 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಸೆರೆ
ಕಾಸರಗೋಡು: ಮಾದಕವಸ್ತು ವಿರುದ್ಧ ಪೊಲೀಸರು, ಅಬಕಾರಿ ಇಲಾಖೆ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವಂ ತೆಯೇ ಮಾದಕವಸ್ತು ವ್ಯಾಪಾರ ತೀವ್ರಗೊಂಡಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮಧೂರು ಹಿದಾಯತ್ ನಗರ ಜೆ.ಪಿ. ನಗರದ ಎಂ. ನೌಶಾದ್ (37), ಹಿದಾಯತ್ ನಗರ ಚೆಟ್ಟುಂಗುಳಿಯ ಅಬ್ದುಲ್ ರಹ್ಮಾನ್ (37) ಎಂಬಿವರನ್ನು ಕಾಸರಗೋಡು ನಗರ ಠಾಣೆ ಇನ್ಸ್ಪೆಕ್ಟರ್ ಪಿ. ನಳಿನಾಕ್ಷನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 13.154 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಇವರು ಸಂಚರಿಸುತ್ತಿದ್ದ ಬೈಕನ್ನು ಪಾರೆಕಟ್ಟೆಯಲ್ಲಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಎಂಡಿಎಂಎ ಸೇದುತ್ತಿದ್ದ ಶೇಣಿ ಅರಿಯಪ್ಪಾಡಿ ಹೌಸ್ನ ಮುಹಮ್ಮದ್ ಬಶ್ರ (35) ಎಂಬಾತನನ್ನು ಬದಿಯಡ್ಕ ಪೊಲೀಸರು ಸೆರೆ ಹಿಡಿದಿದ್ದಾರೆ. ನೆಲ್ಲಿಕಟ್ಟೆ ಪೆಟ್ರೋಲ್ ಪಂಪ್ ಸಮೀಪ ಈತ ಎಂಡಿಎಂಎ ಸೇದುತ್ತಿದ್ದನೆನ್ನಲಾಗಿದೆ.