ಲಕ್ನೋ: ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಪುನಃಸ್ಥಾಪಿಸುವಂತೆ ಕೋರಿ ವಾರಣಾಸಿ ನ್ಯಾಯಾಲಯ ದಲ್ಲಿ ಬಾಕಿ ಇರುವ ಸಿವಿಲ್ ದಾವೆ ನಿರ್ವಹಣೆಯನ್ನು ಪ್ರಶ್ನಿಸಿ, ಪುರಾತತ್ವ ಇಲಾಖೆ (ಎಎಸ್‌ಐ) ನಡೆಸಿದ ವೈಜ್ಞಾನಿಕ ಸಮೀಕ್ಷೆಯನ್ನು ವಿರೋಧಿಸಿ ಸಲ್ಲಿಸಲಾದ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಇಂದು ಬೆಳಿಗ್ಗೆ ವಜಾಗೈದು ತೀರ್ಪು ನೀಡಿದೆ. ಎಎಸ್‌ಐ ನಡೆಸಿದ ವೈಜ್ಞಾನಿಕ ಸಮೀಕ್ಷೆ ವರದಿಯನ್ನು ಇಂದು ಹೈಕೋರ್ಟ್‌ಗೆ ಸಲ್ಲಿಸಲಿದೆ.
