ಜ್ಯೋತಿಷಿಯ ಪತ್ನಿ, ಪ್ರಿಯತಮ ಠಾಣೆಗೆ ಹಾಜರು : ಸ್ವಂತ ಇಷ್ಟದಂತೆ ತೆರಳಲು ನ್ಯಾಯಾಲಯ ಆದೇಶ

ಕಾಸರಗೋಡು: ಕುಂಡಂಕುಳಿಯಿಂದ ನಾಪತ್ತೆಯಾದ ಜ್ಯೋತಿಷಿಯ ಪತ್ನಿ ಹಾಗೂ ಪ್ರಿಯತಮ  ಬೇಡಗಂ  ಠಾಣೆಯಲ್ಲಿ ಹಾಜರಾದರು. ನಾವು ವಿವಾಹವಾ ಗಿದ್ದೇವೆಂದು ಇಬ್ಬರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಮಹಿಳೆಯನ್ನು ಸ್ವಂತ ಇಷ್ಟದಂತೆ ತೆರಳಲು ನ್ಯಾಯಾಲಯ ಆದೇಶಿಸಿದ. ಇದರೊಂದಿಗೆ ನಾಪತ್ತೆಯಾದ ಮಹಿಳೆ ಆಟೋ ಚಾಲಕನಾದ ಪ್ರಿಯತಮನ ಜೊತೆಯಲ್ಲಿ ತೆರಳಿದ್ದಾರೆ. ಫೆ. ೧ರಂದು ಕುಂಡಂಕುಳಿ ಶ್ರೀನಿಲಯದ ಶ್ರೀಕಲಾ (52) ನಾಪತ್ತೆಯಾಗಿದ್ದರು. ಬೆಳಿಗ್ಗೆ 8 ಗಂಟೆ ಹಾಗೂ ರಾತ್ರಿ 10.45 ರ ಮಧ್ಯೆ ನಾಪತ್ತೆಯಾಗಿದ್ದು, ನಾನು ತೆರಳುತ್ತೇನೆ ಎಂದು ಬರೆದಿಟ್ಟು ಶ್ರೀಕಲಾ ನಾಪತ್ತೆಯಾಗಿರುವುದಾಗಿ ಪತಿ ಬೇಡಗಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

You cannot copy contents of this page