ಡ್ರೈವಿಂಗ್ ಟೆಸ್ಟ್ ಸಂಖ್ಯೆ ಹೆಚ್ಚಳ: ಮುಷ್ಕರ ಹಿಂತೆಗೆತ
ತಿರುವನಂತಪುರ: ಡ್ರೈವಿಂಗ್ ಟೆಸ್ಟ್ ಸಂಖ್ಯೆಯನ್ನು ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ. ಅದರಿಂ ದಾಗಿ ಡ್ರೈವಿಂಗ್ ಸ್ಕೂಲ್ ಮಾಲಕರ ಸಂಘಟನೆಯ ನೇತೃತ್ವದಲ್ಲಿ ಕಳೆದ ಎರಡು ವಾರಗಳಿಂದ ನಡೆಸಿಕೊಂಡು ಬರುತ್ತಿದ್ದ ಮುಷ್ಕರವನ್ನು ಹಿಂತೆಗೆದು ಕೊಳ್ಳಲಾಗಿದೆ. ಇದರಿಂದಾಗಿ ಡ್ರೈವಿಂಗ್ ಟೆಸ್ಟ್ ಇಂದಿನಿಂದ ಯಾವು ದೇ ರೀತಿಯ ಅಡಚಣೆ ಇಲ್ಲದೆ ನಿರಾತಂಕವಾಗಿ ಮತ್ತೆ ಆರಂಭಗೊಂಡಿದೆ. ರಾಜ್ಯ ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್ ಮತ್ತು ಡ್ರೈವಿಂಗ್ ಸ್ಕೂಲ್ ಸಂಘಟನೆಗಳ ಪ್ರತಿನಿಧಿಗಳ ಮಧ್ಯೆ ನಡೆದ ಚರ್ಚೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಮೊದಲು ರಸ್ತೆ ಟೆಸ್ಟ್ ನಂತರ ಎಚ್ ಎಂಬ ಪರಿಷ್ಕಾರ ಕ್ರಮವನ್ನು ಹಿಂತೆಗೆದುಕೊಂಡು ಹಳ ರೀತಿಯ ಕ್ರಮವನ್ನೇ ಮತ್ತೆ ಮುಂದುವರಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಮಾತ್ರವಲ್ಲ ಒಂದು ಆರ್‌ಟಿಒ ಕಚೇರಿಯ ಆಶ್ರಯದಲ್ಲಿ ದೈನಂದಿನ ೪೦ ಡ್ರೈವಿಂಗ್ ಟೆಸ್ಟ್ ಬೇಕೆಂದು ಸರಕಾರ ಹೊರಡಿಸಿದ ಆದೇಶವನ್ನು ಹಿಂತೆಗೆದುಕೊಳ್ಳಲಾ ಗಿದೆ. ಅದರ ಬದಲು ಇಬ್ಬರು ಎಂವಿಐಗಳ ನೇತೃತ್ವದಲ್ಲಿ ತಲಾ ೪೦ರಂತೆ ದೈನಂದಿನ ಒಟ್ಟು ೮೦ ಡ್ರೈವಿಂಗ್ ಟೆಸ್ಟ್ ನಡೆಸುವ ತೀರ್ಮಾ ನಕ್ಕೂ ಬರಲಾಗಿದೆ. ಮಾತ್ರವಲ್ಲ ಓರ್ವ ಎಂವಿಐ ಮಾತ್ರವೇ ಇರುವ ಕಚೇರಿಗಳಲ್ಲಿ ಡ್ರೈವಿಂಗ್ ಟೆಸ್ಟ್‌ಗಾಗಿ ಸಲ್ಲಿಸಲಾಗುವ ಅರ್ಜಿಗಳು ನಿಗದಿತ ಸಂಖ್ಯೆಗಿಂತಲೂ ಹೆಚ್ಚಾಗಿ ಲಭಿಸಿದಲ್ಲಿ ಅಂತಹ ಕಚೇರಿಗಳಲ್ಲಿ ಎನ್‌ಫೋರ್ಸ್ ಮೆಂಟ್ ವಿಭಾಗದ ಇತರ ಅಧಿಕಾರಿ ಯನ್ನು ಕ್ರಮೀಕರಿಸಿ ಹೆಚ್ಚುವರಿ ಟೆಸ್ಟ್ ನಡೆಸುವ ಹೊಂ ದಾಣಿಕೆ ತೀರ್ಮಾನಕ್ಕೂ ಸಭೆ ಬಂದಿದೆ.