ತಲಪಾಡಿ- ಚೆಂಗಳ ಸರ್ವೀಸ್ ರಸ್ತೆಯಲ್ಲಿ 77 ಬಸ್ ತಂಗುದಾಣ ನಿರ್ಮಾಣ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಒಂದನೇ ರೀಚ್ ಆಗಿರುವ ತಲಪಾಡಿಯಿಂದ ಚೆಂಗಳದ ವರೆಗಿನ ಸರ್ವೀಸ್ ರಸ್ತೆಯಲ್ಲಿ 77 ಕಡೆ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು. ಕುಂಬಳೆ ದೇವಿನಗರದಲ್ಲಿ ತಂಗುದಾಣ ನಿರ್ಮಾಣ ಪೂರ್ತಿಗೊಂಡಿದೆ. ಇತರ 76 ಕಡೆಗಳಲ್ಲಿ ಬಸ್ ತಂಗುದಾಣದ ಕಾಮಗಾರಿ ಎರಡು ವಾರದೊಳಗೆ ಆರಂಭಿಸಲಾಗುವುದು. ಈ ಮೊದಲು 64 ಕಡೆಗಳಲ್ಲಿ ತಂಗುದಾಣ ನಿರ್ಮಾಣದ ಯಾದಿ ಪ್ರಕಟಿಸಲಾಗಿತ್ತು. ಬಳಿಕ 13 ಕಡೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ೫.೫ ಮೀಟರ್ ಉದ್ದ, 2.7 ಮೀಟರ್ ಎತ್ತರ, 1.8 ಮೀಟರ್ ಅಗಲ ಎಂಬೀ ರೀತಿಯಲ್ಲಿ ಸ್ಟೈನ್‌ಲೆಸ್ ಸ್ಟೀಲ್‌ನಲ್ಲಿ ರೆಡಿಮೇಡ್ ತಂಗುದಾಣವಾಗಿದೆ ನಿರ್ಮಿಸುವುದು.

ಪ್ರಯಾಣಿಕರಿಗೆ ಕುಳಿತುಕೊಳ್ಳಲು ನಾಲ್ಕು ಮೀಟರ್ ಉದ್ದದಲ್ಲಿ ಬೆಂಚು ಕೂಡಾ ಇದರಲ್ಲಿರಲಿದೆ. ಸೇತುವೆ ಹೊರತುಪಡಿಸಿದ ಕಡೆಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು.

RELATED NEWS

You cannot copy contents of this page