ಮೀಯಪದವು: ಇಲ್ಲಿಗೆ ಸಮೀ ಪದ ಪುರಾತನ ತಲೇಕ್ಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನ ದಿಂದ ದೇವರ ಚಿನ್ನಾಭರಣಗಳನ್ನು ಕಳವು ನಡೆಸಲಾಗಿದೆ. ಗರ್ಭಗುಡಿಗೆ ನುಗ್ಗಿದ ಕಳ್ಳ ಶಿವಲಿಂಗದಲ್ಲಿದ್ದ ಚಿನ್ನದ ಮುಕ್ಕಣ್ಣು ಹಾಗೂ ಬೆಳ್ಳಿಯ ಇತರ ಆಭರಣಗಳನ್ನು ಕಳವುಗೈದಿದ್ದಾನೆ. ನಿನ್ನೆ ಮುಂಜಾನೆ ಕ್ಷೇತ್ರಕ್ಕೆ ಅರ್ಚಕ ತಲುಪಿದಾಗ ಕಳವು ಬಗ್ಗೆ ತಿಳಿದು ಬಂದಿದೆ.
ಕಳವಿನ ಬಗ್ಗೆ ಕ್ಷೇತ್ರದ ಟ್ರಸ್ಟಿ ಹಾಗೂ ಪ್ರಧಾನ ಅರ್ಚಕರಾಗಿರುವ ವಾಸುದೇವ ಭಟ್ ಈ ರೀತಿ ಪತ್ರಿಕೆಗೆ ತಿಳಿಸಿದ್ದಾರೆ. ಹಳೆಯ ದೇವಸ್ಥಾನ ವಾದ ಕಾರಣ ಸುತ್ತುಗೋಪುರದ ಬಾಗಿಲು ಹಳತಾಗಿದೆ. ಬಾಗಿಲ ಎಡೆಗೆ ಕಬ್ಬಿಣದ ರಾಡ್ ಹಾಕಿ ಬಾಗಿ ಲನ್ನು ಎತ್ತಿ ಕಳ್ಳ ಒಳನುಗ್ಗಿದ್ದಾನೆ. ಗರ್ಭ ಗುಡಿಯ ಬಾಗಿಲು ಕೂಡಾ ಹಳತಾದ ಕಾರಣ ಬಾಗಿಲು ಹಾಕಲಾಗುತ್ತದೆಯೇ ಹೊರತು ಬೀಗ ಹಾಕುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಒಟ್ಟು ಮೂರು ಪವನ್‌ನಷ್ಟು ತೂಕದ ದೇವರ ಚಿನ್ನದ ಕಣ್ಣು ಹಾಗೂ ಇತರ ಬೆಳ್ಳಿ ಆಭರಣ ಮತ್ತು 2 ಕಾಣಿಕೆ ಹುಂಡಿಯಿಂದ ಹಣವನ್ನು ಕಳ್ಳ ಒಯ್ದಿದ್ದಾನೆ. ಕಳ್ಳ ಉಪಯೋಗಿಸಿದ ಕಬ್ಬಿಣದ ರಾಡ್ ದೇವಸ್ಥಾನದಲ್ಲಿ ಪತ್ತೆಯಾಗಿದೆ. ನಿನ್ನೆ ಮುಂಜಾನೆ ವಾಸುದೇವ ಭಟ್‌ರ ಪುತ್ರ ಶಿವರಾಜ್ ಭಟ್ ದೇವಸ್ಥಾನಕ್ಕೆ ಪೂಜೆಗಾಗಿ ಬಂದಿದ್ದು, ಎಂದಿನಂತೆ ಬಾಗಿಲು ತೆರೆದು ಸ್ನಾನ ಮಾಡಿ ಗರ್ಭ ಗುಡಿಗೆ ತೆರಳಿದಾಗಲಷ್ಟೇ ಕಳವು ಬಗ್ಗೆ ತಿಳಿದು ಬಂದಿದೆ. ಕಳ್ಳ ಕಳವು ನಡೆಸಿ ಹೋಗುವಾಗ ಬಾಗಿಲನ್ನೆಲ್ಲಾ ಸರಿ ಯಾಗಿ ಪೂರ್ವಸ್ಥಿತಿಗೆ ಇಟ್ಟಿದ್ದಾನೆ. ಮತ್ತೆ ಕೂಲಂಕಷವಾಗಿ ನೋಡುವಾಗ ರಾಡ್ ಹಾಕಿದ ಸ್ಥಳದಲ್ಲಿ ಬಾಗಿಲಿಗೆ ಹಾನಿಯಾಗಿರುವುದು ಕಂಡು ಬಂದಿದೆ. ಶಿವರಾಜ್ ಭಟ್ ಸ್ನಾನ ಮಾಡುತ್ತಿದ್ದಾಗ ಸ್ಕೂಟರ್ ಒಂದು ಕ್ಷೇತ್ರದ ಬಳಿ ಯಿಂದ ತೆರಳಿದ ಶಬ್ದ ಕೇಳಿ ಬಂದಿರು ವುದಾಗಿಯೂ ಅವರು ತಿಳಿಸುತ್ತಾರೆ. ಕಳವು ಬಗ್ಗೆ ವಾಸುದೇವ ಭಟ್ ಮಂಜೇಶ್ವರ ಠಾಣೆಗೆ ನಿನ್ನೆ ಮಧ್ಯಾಹ್ನ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳು ಹೆಚ್ಚುತ್ತಲೇ ಇರುವುದು ಈ ಪರಿಸರದ ಜನತೆಯ ನಿದ್ದೆಗೆಡಿಸಿದೆ.