ತೆಂಗಿನಕಾಯಿ ಕಳವು: ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ಮನೆಯ ಶೆಡ್‌ನಿಂದ ಹಾಡಹಗಲೇ ತೆಂಗಿನಕಾಯಿಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗ ಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಜೆ.ಎಂ. ರೋಡ್‌ನ ಅಹಮ್ಮದ್ ಬಶೀರ್ (50), ಕುಂಜತ್ತೂರು ಮಾಡದ ದಿನೇಶ್ (50) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ಈ ತಿಂಗಳ 16ರಂದು ಕುಂಜತ್ತೂರು ಕೊಳಕೆಯ ಹರೀಶ್ ಪಿ.ಕೆ ಎಂಬವರ ಮನೆ ಬಳಿಯ ಶೆಡ್‌ನಿಂದ 200 ತೆಂಗಿನಕಾಯಿ ಕಳವಿಗೀಡಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತಲುಪಿದ ಕಳ್ಳರು ತೆಂಗಿನಕಾಯಿ ಕಳವುನಡೆಸಿದ್ದರು. ಈ ಬಗ್ಗೆ ಹರೀಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು  ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿಗಳ ಕುರಿತು ಸೂಚನೆ ಲಭಿಸಿತ್ತು. ಇದರಿಂದ ಅವರನ್ನು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page