ದೆಹಲಿ ವಿಮಾನ ನಿಲ್ದಾಣದ ಕಟ್ಟಡ ಕುಸಿತ: ಓರ್ವ ಮೃತ್ಯು; 6 ಮಂದಿಗೆ ಗಾಯ
ಹೊಸದಿಲ್ಲಿ: ಹೊಸದಿಲ್ಲಿಯ ಇಂದಿರಾಗಾಂಧಿ ಇಂಟರ್ ನೇಶನಲ್ ವಿಮಾನ ನಿಲ್ದಾಣದ ಕಟ್ಟಡ ಕುಸಿದು ಓರ್ವ ಮೃತಪಟ್ಟು ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಕಟ್ಟಡದ ಅವಶಿಷ್ಟಗಳಡಿ ಸಿಲುಕಿ ಮೂರು ಕಾರುಗಳು ನಿಂತ ಹಲವು ವಾಹನಗಳು ಹಾನಿಗೀಡಾಗಿವೆ. ದುರ್ಘಟನೆ ಸಂಭವಿಸಿದ ಒಂದನೇ ಟರ್ಮಿನಲ್ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಪಘಾತಕ್ಕೆ ಕಾರಣವೇನೆಂದು ತನಿಖೆ ನಡೆಸುವುದಾಗಿ ವ್ಯೋಮಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಇದೇ ವೇಳೆ ತೀವ್ರಗೊಂಡ ಮಳೆಯೇ ದುರ್ಘಟನೆಗೆ ಕಾರಣವೆಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.