ದೇರಂಬಳ ಕಾಲು ಸೇತುವೆ ಕುಸಿದು ಹಲವಾರು ತಿಂಗಳು ಕಳೆದರೂ ನಿರ್ಮಾಣಕ್ಕೆ ಕ್ರಮವಿಲ್ಲ: ಕಂಗಿನಿಂದ ನಿರ್ಮಿಸಿದ ಸೇತುವೆಯಲ್ಲಿ ಅಪಾಯಕಾರಿ ಸಂಚಾರ

ಉಪ್ಪಳ: ದೇರಂಬಳದಲ್ಲಿ ಕಾಲು ಸೇತುವೆ ಕುಸಿದು ಬಿದ್ದು ಹಲವು ತಿಂಗಳು ಕಳೆದರೂ ಮರು ನಿರ್ಮಿಸದಿರುವುದರಿಂದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಊರವರು ನಿರ್ಮಿಸಿದ ಕಂಗಿನ ಸೇತುವೆಯಿಂದ ಸಂಚಾರ ನಡೆಸುತ್ತಿದ್ದರೂ ಭೀತಿಗೆ ಕಾರಣವಾಗುತ್ತಿದೆ. ಮೀಂಜ ಹಾಗೂ ಮಂಗಲ್ಪಾಡಿ ಪಂಚಾಯತ್ ಸಂಗಮ ಸÀ್ಥಳ ದೇರಂಬಳದಲ್ಲಿ 2003ರಲ್ಲಿ ಜಿಲ್ಲಾ ಪಂಚಾಯತ್‌ನಿAದ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಸೇತುವೆ ಸುಮಾರು 6ತಿಂಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ದಿಡೀರನೆ ಕುಸಿದು ಬಿದ್ದಿತ್ತು. ಈ ವೇಳೆ ಜನರ ಸಂಚಾರ ಇಲ್ಲದಿರುವುದರಿಂದ ದುರಂತ ತಪ್ಪಿಹೋಗಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಸಂಕ ಮರು ನಿರ್ಮಾಣಕ್ಕೆ ಒತ್ತಾಯಿಸಿದ್ದರೂ ಹಲವು ತಿಂಗಳು ಕಳೆದರೂ ಸೇತುವೆ ಮರು ನಿರ್ಮಾಣಕ್ಕೆ ಕ್ರಮಯಿಲ್ಲದಿರುವುದು ಊರವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ತಾತ್ಕಾಲಿಕವಾಗಿ ಕಂಗಿನಿAದ ನಿರ್ಮಿಸಿದ ಸೇತುವೆಯ ಮೂಲಕ ಇದೀಗ ಸಂಚರಿಸುತ್ತಿದ್ದಾರೆ. ಇದರಲ್ಲಿ ಸಂಚಾರ ಅಪಾಯಕರವಾಗಿದ್ದು, ಇತ್ತೀಚೆಗೆ ಮಹಿಳೆಯೋರ್ವರು ಆಯತಪ್ಪಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಮೀಂಜ ಪಂಚಾಯತ್‌ನ ದೇರಂಬಳ ನಿವಾಸಿಗಳಿಗೆ ಜೋಡುಕಲ್ಲು ಹಾಗೂ ಬೇಕೂರು ಸರಕಾರಿ ಶಾಲೆಗೆ ಹತ್ತಿರ ದಾರಿಯಾಗಿದ್ದು, ಶಾಲಾ ಮಕ್ಕಳ ಸಹಿತ ಕೆಲಸಗಳಿಗೆ ಅಂಗಡಿಗಳಿಗೆ ಈ ದಾರಿಯಾಗಿ ತೆರಳುತ್ತಿದ್ದಾರೆ. ಹಾಗೆಯೇ ಜೋಡುಕಲ್ಲು, ಮಡಂದೂರು ಸಹಿತ ಪರಿಸರ ನಿವಾಸಿಗಳಿಗೆ ಚಿಗುರುಪಾದೆ, ಮೀಯಪದವು ಪ್ರದೇಶಕ್ಕೂ ಹತ್ತಿರವಾಗಿದ್ದು, ಹೆಚ್ಚಿನ ಜನರು ಈ ಕಾಲು ಸೇತುವೆಯನ್ನೇ ಆಶ್ರಯಿಸುತ್ತಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page