ಧರ್ಮಚಾವಡಿ ಶ್ರೀ ಕೋಮರಾಯ ಚಾಮುಂಡಿ ದೈವಸ್ಥಾನ: ಉತ್ಸವ ಸಮಿತಿ ರೂಪೀಕರಣ

ಮುಳ್ಳೇರಿಯ: ಆದೂರು ಕೈತ್ತೋಡು ಧರ್ಮಚಾವಡಿ ಶ್ರೀ ಕೋಮರಾಯ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಾರ್ಯ ಮತ್ತು ದೈವಗಳ ನೇಮೋತ್ಸವ ಎ. ೨೫ರಿಂದ ೨೭ರವರೆಗೆ ವಿವಿಧ ದೈವಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಯಶಸ್ವಿಗಾಗಿ ಉತ್ಸವ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ದೈವಸ್ಥಾನದ ಪರಿಸರದಲ್ಲಿ ನಡೆಯಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವೀಂದ್ರ ರೈ ಮಲ್ಲಾವರ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ನಾಸರ್, ಬ್ಲಾಕ್ ಪಂಚಾಯತ್ ಸದಸ್ಯ ಕೃಷ್ಣನ್ ಬಂದಡ್ಕ, ಪಂಚಾಯತ್ ಸದಸ್ಯ ವೇಣು ಕುಂಟಾರು, ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್ ಗೌರವಾಧ್ಯಕ್ಷ ರಘುನಾಥ ಶೆಟ್ಟಿ ಆದೂರು, ಶಶಿಧರನ್ ಪಡ್ಯತ್ತಡ್ಕ, ನಲಿಕೆದಾಯ ಸಮುದಾಯದ ಕೇರಳ ರಾಜ್ಯ ಸಮಿತಿ ಅಧ್ಯಕ್ಷ ಹರಿಶ್ಚಂದ್ರನ್ ಕಾಞಂಗಾಡ್ ಶುಭಾಶಂಸನೆಗೈದರು. ಕೊರಗಪ್ಪ ಶೆಟ್ಟಿ ಚೇಡಿಗುಂಡಿ, ಮೂಸಾನ್ ಚೇಡಿಗುಂಡಿ, ಎಕೆ ಚುಕ್ರ ಕಡೆಯಂಗೋಡು, ಕೊರಗಪ್ಪ ಬಿ, ಇಬ್ರಾಹಿಂ ಉಪಸ್ಥಿತರಿದ್ದರು.

ಪ್ರತಿಷ್ಠೋತ್ಸವ ಸಮಿತಿಯ ರಕ್ಷಾಧಿಕಾರಿಯಾಗಿ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ, ಗೌರವಾಧ್ಯಕ್ಷರಾಗಿ ಕೃಷ್ಣಯ್ಯ ಬಲ್ಲಾಳ್, ರಘುನಾಥ ಶೆಟ್ಟಿ ಆದೂರು, ಅಧ್ಯಕ್ಷರಾಗಿ ಶಶಿಧರನ್ ಪಡ್ಯತ್ತಡ್ಕ, ಕಾರ್ಯದರ್ಶಿಯಾಗಿ ಮಾಲಿಂಗ ಕೆ, ಕೋಶಾಧಿಕಾರಿಯಾಗಿ ಗಂಗಾಧರ ಶೆಟ್ಟಿ ಆದೂರು ಇವರನ್ನು ಒಳಗೊಂಡ ೨೦೧ ಮಂದಿಯ ಸಮಿತಿಯನ್ನು ರೂಪೀಕರಿಸಲಾಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯಾನಂದ ಕೈತ್ತೋಡು ಸ್ವಾಗತಿಸಿ, ಮಾಲಿಂಗ ಕೆ. ವಂದಿಸಿದರು.

RELATED NEWS

You cannot copy contents of this page