ನಗ್ನ ವೀಡಿಯೋ ತೋರಿಸಿ ಬೆದರಿಸಿ ಹಣ ಎಗರಿಸಿ ಯುವಕನಿಗೆ ಹಲ್ಲೆ: ಮೂವರ ಬಂಧನ

ಕಾಸರಗೋಡು: ಯುವಕನ ನಗ್ನ ವೀಡಿಯೋ ತೋರಿಸಿ ಬೆದರಿಸಿ ಹಣ ಎಗರಿಸಿದ ಬಳಿಕ ಮತ್ತೆ ಹಣ ನೀಡುವಂತೆ ಆತನಿಗೆ ಕಾರಿನೊಳಗೆ ಹಲ್ಲೆ ನಡೆಸಿದ ದೂರಿನಂತೆ ಕಾಸರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣೂರು ಕಲ್ಯಾಡ್ ಬಲ್ಲಾತ್ತೂರು ಕುಂಞಿ ಪರಂಬತ್  ಹೌಸ್‌ನ ಅಬ್ದುಲ್ ಜಬ್ಬಾರ್ ಕೆ. (38) ಎಂಬಾತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ  ನಾಲ್ಕು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪೈಕಿ ಆರೋಪಿಗಳಾದ ಚೆಂಗಳ ಪಾಣಳಂ ಪುತ್ತನ್‌ಪಾಡಿ ಹೌಸ್‌ನ ಮೊಹಮ್ಮದ್ ರಾಶಿದ್ (21), ಚೆಂಗಳ ನಾಲ್ಕನೇ ಮೈಲ್ ರೆಹಮ್ಮತ್ ನಗರದ ಮೊಹಮ್ಮದ್ ಅಸ್ಕರ್ ಅಲಿ (21) ಮತ್ತು ಚೆಂಗಳ ಇಂದಿರಾನಗರ ಚೆರ್ಕಳ ಹೌಸ್‌ನ ಮೊಹಮ್ಮದ್ ಅಸ್ವಾದ್ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟಂಬರ್ 19ರಂದು ಪ್ರಕರಣದ ಒಂದನೇ ಆರೋಪಿ ಅಸ್ಕರ್ ಅಲಿ ಕಾಸರಗೋಡು ನಗರದ ಬಯಲೊಂದರಲ್ಲಿ ನನ್ನ ನಗ್ನ ವೀಡಿಯೋಗಳನ್ನು ತೋರಿಸಿ ಅದನ್ನು ಇತರರಿಗೆ ಕಳುಹಿಸಿಕೊಡುವುದಾಗಿ ಹೇಳಿ ಬೆದರಿಸಿ, ನನ್ನ ಮೊಬೈಲ್ ಫೋನ್‌ನ್ನು ಹಿಡಿದೆಳೆದು ಅದರ ಮೂಲಕ ೧೩,೬೦೦ ರೂ. ಹಣವನ್ನು ಆತನ ಬ್ಯಾಂಕ್ ಖಾತೆಗೆ ಬದಲಾಯಿಸಿದನೆಂದೂ, ಅದಾದ ನಂತರ ನ.೨೯ರಂದು ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ   ನಾಲ್ಕು ಮಂದಿ ಆರೋಪಿಗಳು ಕಾರಿ ನಲ್ಲಿ ಬಂದು ಇನ್ನಷ್ಟು ಹಣ ನೀಡು ವಂತೆ ಬೆದರಿಸಿ ಕಾರಿಗೆ ಬಲವಂತವಾಗಿ ಹತ್ತಿಸಿ ಅದರೊಳಗೆ ನನ್ನ ಮೇಲೆ ಹಲ್ಲೆ ನಡೆಸಿ, ನನ್ನ ಮೊಬೈಲ್ ಫೋನನ್ನು ಅಪಹರಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ಜಬ್ಬಾರ್ ಆರೋಪಿಸಿದ್ದಾನೆ. ಈ ಪ್ರಕರಣದ ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page