ನಟ ಜಯರಾಂರ ಪುತ್ರಿ ಮಾಳವಿಕ ದಾಂಪತ್ಯ ಜೀವನಕ್ಕೆ

ಗುರುವಾಯೂರು: ಚಲನಚಿತ್ರ ನಟ ಜಯರಾಂ ಹಾಗೂ ಪಾರ್ವತಿ ದಂಪತಿ ಪುತ್ರಿ ಮಾಳವಿಕ ಜಯರಾಂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಗುರುವಾಯೂರು ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ವಿವಾಹ ನೆರವೇರಿದೆ. ಹತ್ತಿರದ ಸಂಬಂಧಿಕರು ಹಾಗೂ ಗೆಳೆಯರು ವಿವಾಹದಲ್ಲಿ ಭಾಗವಹಿಸಿದರು. ಕಳೆದ ಜನವರಿಯಲ್ಲಿ ಮಾಳವಿಕ ಹಾಗೂ  ನವನೀತ್ ಗಿರೀಶ್‌ರ ಮಧ್ಯೆ ವಿವಾಹ ನಿಶ್ಚಯವಾಗಿತ್ತು. ತಮಿಳು  ಸಿನಿಮಾ ಮಾಡೆಲ್‌ನಲ್ಲಿ ಕೆಂಪು ಪಟ್ಟೆ ಸೀರೆ ಧರಿಸಿದ್ದ ಮಾಳವಿಕ ಹಸೆಮಣೆ ಏರಿದ್ದರು. ಬಿಳಿ ಮುಂಡು ಧರಿಸಿ ಕೇರಳೀಯ ಮಾದರಿಯಲ್ಲಿ ನವನೀತ್  ತಲುಪಿದ್ದರು.  ಪಾಲಕ್ಕಾಡ್ ನೆನ್ಮಾರ ನಿವಾಸಿಯಾದ ನವನೀತ್ ಯುಕೆಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ವಿವಾಹ ಸಂದರ್ಭ ದಲ್ಲಿ ಕಾಳಿದಾಸ್ ಜಯರಾಂ,  ತಾರಿಣಿ, ಸುರೇಶ್ ಗೋಪಿ, ಪತ್ನಿ ರಾಧಿಕಾ, ಅಪರ್ಣಾ ಬಾಲಮುರಳಿ ಮೊದಲಾದವರು ಉಪಸ್ಥಿತರಿದ್ದರು.

RELATED NEWS

You cannot copy contents of this page