ನಮಾಜು ಮಧ್ಯೆ ಬಿದ್ದು ಗಾಯಗೊಂಡಿದ್ದ ವೃದ್ದೆ  ಚಿಕಿತ್ಸೆ ಮಧ್ಯೆ ನಿಧನ

ಕುಂಬಳೆ: ಮನೆಯಲ್ಲಿ ನಮಾಜು ಮಾಡುತ್ತಿದ್ದ ಮಧ್ಯೆ ಬಿದ್ದು ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತ ಪಟ್ಟರು. ಬಂದ್ಯೋಡು ಮುಟ್ಟಂ ಬಂಗರೆ ನಿವಾಸಿ ಬಿಫಾತಿಮ (89) ಮೃತಪಟ್ಟವರು. ಒಂದು ತಿಂಗಳ ಹಿಂದೆ ಇವರು ಬಿದ್ದು ಗಾಯಗೊಂಡಿದ್ದರು. ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿರುವ ಮಧ್ಯೆ ಸಾವು ಸಂಭವಿಸಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ಮುಹಮ್ಮದ್, ಇಬ್ರಾಹಿಂ, ಆಮಿನ, ಮರಿಯುಮ್ಮ, ಸಲ್ಮಾ, ಸಫಿಯ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page