ನಾಗರಹಾವನ್ನು ಬಾಯಿಯೊಳಗೆ ತುರುಕಿಸಿ ಸೆಲ್ಫಿ: ಯುವಕ ಮೃತ್ಯು

ನಿಸಮಾಬಾದ್: ನಾಗರಹಾವನ್ನು ಸೆರೆಹಿಡಿದು ಅದರ ತಲೆಯನ್ನು ಬಾಯಿಯೊಳಗೆ ತುರುಕಿಸಿ ವೀಡಿಯೋ ಚಿತ್ರೀಕರಿಸುವ ಮಧ್ಯೆ ಯುವಕ ಮೃತಪಟ್ಟಿದ್ದಾನೆ. ತೆಲಂಗಾನ ಕಾಮರೆಡ್ಡಿ ದೇಸಾಯಿಪೇಟೆ ಗ್ರಾಮದಲ್ಲಿ ಇತ್ತೀಚೆಗೆ ಈ ದುರಂತ ಸಂಭವಿಸಿದೆ. ಹಾವು ಹಿಡಿಯುವವನಾದ ಮೋಚಿ ಶಿವರಾಜ್ (20) ಮೃತಪಟ್ಟ ಯುವಕ. ಶಿವರಾಜ್ ಹಾಗೂ ತಂದೆ ಗಂಗಾರಾಮ್ ಹಾವು ಹಿಡಿತಗಾರರಾಗಿದ್ದಾರೆ. ನಾಗರಹಾವು ಇದೆ ಎಂದು ದೇಸಾಯಿಪೇಟೆಯ ಕಾಲನಿ ನಿವಾಸಿಗಳು ಕರೆ ಮಾಡಿದ ಹಿನ್ನೆಲೆಯಲ್ಲಿ ಗಂಗಾರಾಮ್ ಹಾಗೂ  ಪುತ್ರ ಅಲ್ಲಿಗೆ ತೆರಳಿದ್ದರು. ಬಳಿಕ ಹಾವನ್ನು ಹಿಡಿದು ಶಿವರಾಜ್ ವೀಡಿಯೋ ಚಿತ್ರೀಕರಿಸಿ, ಸೆಲ್ಫಿ ತೆಗೆದು ನಾಗರಹಾವಿನ ತಲೆಯನ್ನು ಬಾಯಿಯೊಳಗೆ ಇಟ್ಟು ದೃಶ್ಯ ಚಿತ್ರೀಕರಿಸುತ್ತಿದ್ದ ಮಧ್ಯೆ ದುರಂತ ಸಂಭವಿಸಿದೆ. ನಾಲಿಗೆಗೆ ಹಾವು ಕಚ್ಚಿ ಶಿವರಾಜ್ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *

You cannot copy content of this page