ನಿಧನ

ಪೆರ್ಲ: ಪಡ್ರೆ ಎಡಮಲೆ ನಿವಾಸಿ ದಿ| ಮಾಧವ ಭಟ್‌ರ ಪತ್ನಿ ಗಿರಿಜ (83) ನಿಧನ ಹೊಂದಿದರು. ಶೋಬಾನೆ ಹಾಡುವುದರಲ್ಲಿ ಪ್ರವೀಣೆಯಾಗಿದ್ದರು. ಹಲವಾರು ಶೋಬಾನೆ ಹಾಡುಗಳನ್ನು ಅಭ್ಯಸಿಸಿದ್ದರು. ಮೃತರು ಮಕ್ಕಳಾದ ವೆಂಕಟ್ರಮಣ ಭಟ್ (ಕಾಸರಗೋಡು ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ಸದಸ್ಯ), ಅರವಿಂದ ಭಟ್ (ನಿವೃತ್ತ ಅಧ್ಯಾಪಕ), ಉಷಾ, ಶ್ರೀನಿವಾಸ, ಸಂಧ್ಯಾಗೀತಾ, ಸಚ್ಚಿದಾನಂದ, ಅಳಿಯಂದಿರಾದ ಮಾಧವ ಭಟ್, ಗೋವಿಂದ ಭಟ್, ಸೊಸೆಯಂದಿರಾದ ವಿದ್ಯಾ, ಊರ್ಮಿಳ, ರಾಧಿಕ, ಮಮತಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ನಿಧನಕ್ಕೆ ಶಾಸಕ ಎಕೆಎಂ ಅಶ್ರಫ್, ಪ್ರದೀಪ್ ಕುಮಾರ್ ಕಲ್ಕೂರ, ಎ.ಆರ್. ಸುಬ್ಬಯ್ಯಕಟ್ಟೆ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕ, ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡೆಮಿ, ಮೀಡಿಯಾ ಕ್ಲಾಸಿಕಲ್ಸ್ ಸಂತಾಪ ಸೂಚಿಸಿವೆ.

You cannot copy contents of this page