ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ, ಬಸ್‌ಗೆ ಢಿಕ್ಕಿ ಹೊಡೆದು  ಪಲ್ಟಿ: ತಂದೆ, ಪುತ್ರ ಅಪಾಯದಿಂದ ಪಾರು

ಪೆರ್ಲ: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಬಳಿಕ ನಿಲ್ಲಿಸಿದ್ದ ಬಸ್‌ಗೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ.

ಪೆರ್ಲದಲ್ಲಿ ನಿನ್ನೆ ಸಂಜೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಅಯ್ಯಪ್ಪ ವ್ರತಧಾರಿಗಳಾದ ತಂದೆ ಹಾಗೂ ಪುತ್ರ ಅದೃಷ್ಟವಶಾತ್ ಅಪಾ ಯದಿಂದ ಪಾರಾಗಿದ್ದಾರೆ.  ಕಾಸರ ಗೋಡು ತಾಳಿಪಡ್ಪು ನಿವಾಸಿ ಜನಾರ್ದನ (೪೯), ಪುತ್ರ ಧನುಷ್ (೧೨) ಎಂಬಿವರು ಅಪಾಯದಿಂದ ಪಾರಾಗಿ ದ್ದಾರೆ.  ಶಬರಿ ಮಲೆ ಕ್ಷೇತ್ರ ದರ್ಶನಕ್ಕಾಗಿ ಮಾಲೆ ಧರಿಸಿರುವ ಇವರು ನಿನ್ನೆ ಪುತ್ತೂರಿಗೆ ತೆರಳಿದ್ದರು. ಅಲ್ಲಿಂದ ಮರಳುತ್ತಿದ್ದ ವೇಳೆ ಅಪಘಾತವುಂಟಾಗಿದೆ. ಅಪಘಾತ ಬಗ್ಗೆ ತಿಳಿದು ತಲುಪಿದ ನಾಗರಿಕರು ಕಾರಿನೊಳಗಿ ನಿಂದ ಇಬ್ಬರನ್ನು ಹೊರತೆಗೆದು ರಕ್ಷಿಸಿದ್ದಾರೆ.

You cannot copy contents of this page