ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಹಾನಿ: ೨ ಲಕ್ಷ ರೂ. ನಷ್ಟ

ಕಾಸರಗೋಡು: ವಿದ್ಯಾನಗರ ಸಮೀಪದ ಉದಯಗಿರಿಯಲ್ಲಿ ಸ್ಟೇಟ್ ಲೈಬ್ರೆರಿ ಕೌನ್ಸಿಲ್‌ಗಾಗಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದೊಳಗೆ ನುಗ್ಗಿ ಅದರ ಬಾಗಿಲು, ಕಿಟಿಕಿ ಗಾಜು, ಫ್ಯಾನ್ ಇತ್ಯಾದಿಗಳನ್ನು ಒಡೆದು ಹಾನಿಗೊಳಿಸಲಾಗಿದೆಯೆಂದು ದೂರಿ ಪ್ರಸ್ತುತ ಕಟ್ಟಡದ ನಿರ್ಮಾಣ ಹೊಣೆಗಾರಿಕೆ ಹೊಂದಿರುವ ಸಂಸ್ಥೆಯ ಸೈಟ್ ಮೆನೇಜರ್ ಸತೀಶನ್ ಕೆ.ವಿ. ಕಾಸರಗೋಡು ಪೊಲೀಸರಿಗೆ ದೂರು ನೀಡದ್ದಾರೆ.  ಇದರಿಂದ ಎರಡು ಲಕ್ಷ ರೂ.ಗಳ  ನಷ್ಟ ಲೆಕ್ಕಹಾಕಲಾಗಿದೆ. ಇದು ಸಮಾಜಘಾತಕ

ಕೃತ್ಯವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page