ನಿಲ್ಲಿಸಿದ್ದ ಬಸ್‌ನಿಂದ ಹಣ ಕಳವು: ಆರೋಪಿ ಬಂಧನ

ಪೆರ್ಲ: ನಿಲ್ಲಿಸಿದ್ದ ಬಸ್‌ನಿಂದ 10 ಸಾವಿರ ರೂ. ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  ವಾಣಿನಗರ ನಿವಾಸಿ ಉಮ್ಮರ್ (56) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನವಂಬರ್ ೫ರಂದು ಮಧ್ಯಾಹ್ನ ತಲಪಾಡಿ ಸಮೀಪ ಬಸ್ ನಿಲ್ಲಿಸಿ ಸಿಬ್ಬಂದಿಗಳು ಆಹಾರ ಸೇವಿಸಲು ತೆರಳಿದ್ದರು. ಈ ವೇಳೆ ಚಾಲಕನ ಸೀಟಿನ ಮೇಲಿರುವ ಪೆಟ್ಟಿಗೆಯಲ್ಲಿರಿಸಿದ್ದ ಹಣವನ್ನು ಉಮ್ಮರ್ ಕಳವುಗೈದಿದ್ದಾನೆಂದು ದೂರಲಾಗಿದೆ. ಸಿಬ್ಬಂದಿಗಳು ಮರಳಿ ತಲುಪಿದಾಗಲೇ ಹಣ ಕಳವು ಗೀಡಾದ ವಿಷಯ ತಿಳಿದು ಬಂದಿದೆ. ಈ ಬಗ್ಗೆ ಕಂಡಕ್ಟರ್ ಸೋಂಕಾಲ್ ಕೋಡಿಬೈಲಿನ ಅಬ್ದುಲ್ ಲತೀಫ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಹಣ ಕಳವುಗೈದಿರುವುದು ಉಮ್ಮರ್ ಆಗಿದ್ದಾನೆಂದು ತಿಳಿದುಬಂದಿತ್ತು. ಇದರಂತೆ ಮಂಜೇಶ್ವರ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್, ಎಸ್.ಐ. ಕೆ.ಆರ್. ಉಮೇಶನ್ ಎಂಬವರು ಸೇರಿ ಉಮ್ಮರ್‌ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕಾಸರಗೋಡು ನ್ಯಾಯಾಲಯದ ಮೆಜಿಸ್ಟ್ರೇಟ್‌ರ ಮುಂದೆ ಹಾಜರುಪಡಿಸಿದ್ದು, ಈ ವೇಳೆ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page