ನಿವೃತ್ತ ದಫೇದಾರ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ಕಲೆಕ್ಟರೇಟ್‌ನ ನಿವೃತ್ತ ದಫೇದಾರ್ ಮನೆಯೊಳಗೆ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕೂಡ್ಲು ಆರ್‌ಡಿ ನಗರ ಕಾಳ್ಯಂಗಾಡ್‌ನ ಪ್ರವೀಣ್‌ರಾಜ್ (60) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ  ಈ ಘಟನೆ ನಡೆದಿದೆ. ಘಟನೆ ವೇಳೆ ಪತ್ನಿ ಆಶಾ ಮನೆಯ ಹೊರಗೆ ಬಟ್ಟೆ ತೊಳೆಯುತ್ತಿದ್ದರು. ಅವರು ಒಳಗೆ ಪ್ರವೇಶಿಸಿದಾಗ ಪ್ರವೀಣ್‌ರಾಜ್ ಮನೆಯ ಸೆಂಟ್ರಲ್‌ಹಾಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ತಲುಪಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದಿವಂಗತರಾದ ಸಂಜೀವ ಶೆಟ್ಟಿ- ಸುನಂದ ದಂಪತಿಯ ಪುತ್ರನಾದ ಮೃತರು ಪತ್ನಿ, ಸಹೋದರರಾದ ಸುಧೀರ್, ಪ್ರಕಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page