ನೀರಿನ ಬಿಲ್ ಬಾಕಿ ಸಂಪರ್ಕ ವಿಚ್ಛೇಧನ

ಕಾಸರಗೋಡು: ಕೇರಳ ಜಲ ಪ್ರಾಧಿಕಾರ ಕಾಸರಗೋಡು ಡಿವಿಶನ್ ಅಧೀನದಲ್ಲಿರುವ ನೀರಿನ ದರ ಕಟ್ಟದೆ ಬಾಕಿ ಉಳಿಸಿರುವ ಫಲಾನುಭವಿಗಳ, ಹಾನಿಯಾದ ಮೀಟರ್ ಬದಲಿಸದ  ಫಲಾನುಭವಿಗಳ ನೀರಿನ ಸಂಪರ್ಕವನ್ನು ವಿಚ್ಛೇಧಿಸಲಾಗುತ್ತಿದೆ ಎಂದು ಎಕ್ಸಿ ಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ಫಲಾನುಭವಿಗಳು ಶೀಘ್ರವೇ ಕಾಸರಗೋಡು ಡಿವಿಶನ್ ವ್ಯಾಪ್ತಿಯ ಚೆರುವತ್ತೂರು, ಕಾಞಂಗಾಡ್, ಕಾಸರಗೋಡು, ಕುಂಬಳೆ, ಬೋವಿಕ್ಕಾನ ಎಂಬೀ ಸೆಕ್ಷನ್ ಕಚೇರಿಗಳಲ್ಲಿ ಅಥವಾ ಆನ್‌ಲೈನ್ ಮೂಲಕ ಬಾಕಿ ಉಳಿಸಿದ ಮೊತ್ತವನ್ನು ಪಾವತಿಸಬೇಕೆಂದು, ಅಲ್ಲದಿದ್ದರೆ ಸಂಪರ್ಕ ವಿಚ್ಛೇಧಿಸ ಲಾಗುವುದೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

You cannot copy contents of this page