ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಅಧಿಕಾರಿಗೆ ಬೆದರಿಕೆ: ಯುವಕನ ವಿರುದ್ಧ ಕೇಸು

ಕಾಸರಗೋಡು: ಹೇಳಿಕೆ ಓದಿ ಕೇಳಿದ ಬಳಿಕ ಸಹಿ ಹಾಕುವುದಕ್ಕಾಗಿ ನ್ಯಾಯಾಲಯದ ವರಾಂಡದಲ್ಲಿ ಕುಳಿತುಕೊಂಡಿದ್ದ ಮಧ್ಯೆ ಪೊಲೀಸ್  ಅಧಿಕಾರಿಯನ್ನು ಬೆದರಿಸಿರುವುದಾಗಿ ದೂರಲಾಗಿದೆ. ಚೀಮೇನಿ ಪೊಲೀಸ್ ಠಾಣೆಯ ಸೀನಿಯರ್ ಪೊಲೀಸ್ ಆಫೀಸರ್ ಪಿ.ವಿ. ಸುದೀಶ್‌ರ ದೂರಿ ನಂತೆ ರಾಜೀವನ್ ಎಂಬಾತನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ನೀಲೇಶ್ವರ ಪೊಲೀಸ್ ನೋಂದಾಯಿಸಿದ ಪ್ರಕರಣದಲ್ಲಿ ರಾಜೀವನ್ ಆರೋಪಿಯಾಗಿದ್ದಾನೆ. ಪ್ರಸ್ತುತ ಪ್ರಕರಣದಲ್ಲಿ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (2)ದಲ್ಲಿ ಹೇಳಿಕೆ ನೀಡಲು ರಾಜೀವನ್ ತಲುಪಿದ್ದನು. ಹೇಳಿಕೆಯನ್ನು ಓದಿ ಕೇಳಿದ ಬಳಿಕ ಸಹಿ ಹಾಕಲು ನ್ಯಾಯಾಲಯದ ವರಾಂಡ ದಲ್ಲಿ ಕುಳಿತುಕೊಂಡಿದ್ದ ಮಧ್ಯೆ ‘ನಿನ್ನನ್ನು ಸುಮ್ಮನೆ ಬಿಡೆನು, ಹೊರಗಿಳಿದು ಬಂ ದಾಗ ನೋಡಿಕೊಳ್ಳುತ್ತೇನೆ, ನ್ಯಾಯಾಲಯ ನಿನ್ನ ತರವಾಡು ಸೊತ್ತಲ್ಲ’ ಎಂದು ಹೇಳಿ ಬೆದರಿಸಿರುವುದಾಗಿ ದೂರಲಾಗಿದೆ.

You cannot copy contents of this page