ನ್ಯಾಯಾಲಯದಲ್ಲಿ ನೌಕರೆಗೆ ಅಪಮಾನ: ಜಿಲ್ಲಾ ಜಡ್ಜ್ ಅಮಾನತು

ಕೊಚ್ಚಿ: ನ್ಯಾಯಾಲಯದ ನೌಕರೆಯೊಂದಿಗೆ ಅಪ ಮರ್ಯಾದೆಯಿಂದ ವ್ಯವಹರಿಸಿದ ಘಟನೆಯಲ್ಲಿ ಕಲ್ಲಿಕೋಟೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ನ್ಯಾಯಾಧೀಶರ ಪ್ಯಾನಲ್ ವರದಿ ಅನುಸಾರವಾಗಿ ಹೈಕೋರ್ಟ್‌ನ ಅಡ್ಮಿನಿಸ್ಟ್ರೇಟಿವ್ ಸಮಿತಿ ಈ ಕ್ರಮ ಕೈಗೊಂಡಿದೆ.  ಕಲ್ಲಿಕೋಟೆ ವಡಗರ, ಎಂಎಸಿಟಿ ನ್ಯಾಯಾಧೀಶ ಎಂ. ಶುಹೈಬ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ನ್ಯಾಯಾಧೀಶರ ಚೇಂಬರ್‌ನಲ್ಲಿ ಮಹಿಳೆಯನ್ನು ಅಪಮಾನಿಸಿರುವುದಾಗಿ ದೂರಲಾಗಿತ್ತು. ಈ ಘಟನೆಯಲ್ಲಿ ಅಡಿಶನಲ್ ಜಿಲ್ಲಾ ಜಡ್ಜ್‌ರನ್ನು ವಡಗರಕ್ಕೆ ವರ್ಗಾ ಯಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ಅಮಾನತುಗೊಳಿಸಲಾಗಿದೆ. ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನಿನ್ನೆ ತುರ್ತು ಸಭೆ ಸೇರಿ ಹೈಕೋರ್ಟ್‌ನ ಅಡ್ಮಿನಿಸ್ಟ್ರೇಟಿವ್ ಸಮಿತಿ ಸುಹೈಬ್‌ರನ್ನು ಅಮಾನತು ಮಾಡಲು ತೀರ್ಮಾನಿಸಿದೆ. ನ್ಯಾಯಾಧೀಶರ ಚೇಂಬರ್‌ನಲ್ಲಿ ನಡೆದ ಘಟನೆ ಜ್ಯುಡೀಶೆರಿಯ ಹೆಸರಿಗೆ ಕಳಂಕ ತಂದಿರುವುದಾಗಿ ಸಭೆ ಅಭಿಪ್ರಾ ಯಪಟ್ಟಿದೆ. ಇದೇ ವೇಳೆ ನೌಕರೆ ಇದುವರೆಗೆ ಲಿಖಿತವಾಗಿ ದೂರು ನೀಡಿಲ್ಲ. ಘಟನೆಯ ಬಗ್ಗೆ ಕಲ್ಲಿಕೋಟೆ ಪ್ರಿನ್ಸಿಪಲ್ ಜಿಲ್ಲಾ ಜಡ್ಜ್ ನೀಡಿದ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page