ಪಂಜಿಕಲ್ಲು ಕಿದೂರಿನಲ್ಲಿ ರಕ್ತದಾನ ಶಿಬಿರ

ಕುಂಬಳೆ:  ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಂಜಿಕಲ್ಲು ಕಿದೂರು ಇವರ ನೇತೃತ್ವದಲ್ಲಿ ರಕ್ತದಾನ ಶಿಬಿರ ರಾಜೀವ್ ಭವನ ಕುಂಟಂಗೇರಡ್ಕ ದಲ್ಲಿ ನಡೆಯಿತು. ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಿಬ್ಬಂದಿ ವರ್ಗದವರು ಸಂಯೋಜಿಸಿದರು. ಜಾ| ತೃಪ್ತಿ ಆಳ್ವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಅನೂಪ್ ಕುಮಾರ್ ಇ. ಭಾಗವಹಿಸಿದರು. ಪಂಚಾಯತ್ ಸದಸ್ಯ ರವಿರಾಜ್ ಕೆ.ಜಿ, ಡಿಸ್ಟ್ರಿಕ್ಟ್ ಕೊಆರ್ಡಿ ನೇಟರ್ ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್ ಕುಮಾರ್, ಕೆ.. ಚಂದ್ರ ಕಾಜೂರು ಶ್ರೀ ಕುಪ್ಪೆ ಪಂಜುರ್ಲಿ ಸೇವಾ ಸಮಿತಿ ಕುಂಟಂಗೇರಡ್ಕ ಭಾಗವಹಿಸಿದರು. ಮಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು. ಡಾ| ತೃಪ್ತಿ ಆಳ್ವ ಇವರನ್ನು ಸನ್ಮಾನಿಸ ಲಾಯಿತು. ವಿನೋದ್ ಕುಮಾರ್ ಶ್ರಾವಣಕೆರೆ ಸ್ವಾಗತಿಸಿ ಪೂಜಿತ್ ಕುಲಾಲ್ ಶ್ರಾವಣಕೆರೆ ಪರಿಚಯಿಸಿದರು. ಪ್ರಶಾಂತ್ ಕುಲಾಲ್ ವಂದಿಸಿ, ಮೇಕ್ಸಿ ಡಿಸೋಜ ನಿರೂಪಿಸಿದರು.

You cannot copy contents of this page