ಪತ್ನಿಗೆ ಇರಿದು ಗಾಯಗೊಳಿಸಿದ ಬಳಿಕ ಪತಿ ನೇಣು ಬಿಗಿದು ಸಾವು

ಹೊಸದುರ್ಗ: ಪತ್ನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಬಳಿಕ ಪತಿ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಚೆರುಪುಳ ಪ್ರಾಪೊಯಿಲ್‌ನಲ್ಲಿ ವ್ಯಾಪಾರಿಯಾಗಿ ರುವ ಪನಂಕುನ್ನಿಲ್ ಶ್ರೀಧರನ್ (61) ಮೃತಪಟ್ಟ ವ್ಯಕ್ತಿ.  ನಿನ್ನೆ ರಾತ್ರಿ ೧೨ ಗಂಟೆ ವೇಳೆ ಘಟನೆ ನಡೆದಿದೆ. ಪತ್ನಿ ಸುನಿತ (52)ರಿಗೆ ಇರಿದು ಗಾಯಗೊಳಿಸಿದ ಬಳಿಕ ಶ್ರೀಧರನ್ ನೇಣು ಬಿಗಿದು ಸಾವಿಗೀಡಾಗಿದ್ದಾರೆ.

ಇರಿತದಿಂದ ಗಾಯಗೊಂಡ ಸುನಿತರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ದಂಪತಿ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತೆನ್ನಲಾಗಿದೆ. ನಿನ್ನೆಯೂ ಜಗಳ ನಡೆದಿದ್ದು, ಈ ವೇಳೆ ಶ್ರೀಧರನ್ ಪತ್ನಿಗೆ ಇರಿದಿ ದ್ದಾರೆನ್ನಲಾಗಿದೆ.

ಇರಿತದಿಂದ ಗಾಯಗೊಂಡ ಸುನಿತ ನೆರೆಮನೆಗೆ ಓಡಿ ಅಪಾಯದಿಂದ ತಪ್ಪಿಸಿಕೊಂಡಿದ್ದರು. ವಿಷಯ ತಿಳಿದು ಸ್ಥಳೀಯರು ತಲುಪಿ ನೋಡಿದಾಗ ಶ್ರೀಧರನ್ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಇವರಿಗೆ ಶ್ರೀರಾಜ್, ಅರ್ಜುನ್ ಎಂಬಿಬ್ಬರು ಮಕ್ಕಳಿದ್ದಾರೆ.

RELATED NEWS

You cannot copy contents of this page