ಪರಪ್ಪದಲ್ಲಿ ಚಿರತೆ ಪ್ರತ್ಯಕ್ಷ ವದಂತಿ ಜನತೆ ಆತಂಕದಲ್ಲಿ

ಕಾಸರಗೋಡು: ಇರಿಯಣ್ಣಿಯಲ್ಲಿ ಪ್ರತ್ಯಕ್ಷಗೊಂಡ ಚಿರತೆಯ ಪತ್ತೆಗಾಗಿ ಗೂಡು ಸ್ಥಾಪಿಸಿ ಅರಣ್ಯಾಧಿಕಾರಿಗಳು ಶೋಧ ನಡೆಸುತ್ತಿರುವಂತೆಯೇ ಪರಪ್ಪ ದಲ್ಲಿ ಚಿರತೆ ಕಂಡು ಬಂದಿರುವುದಾಗಿ ಸುದ್ದಿಯಾಗಿದೆ. ಪರಪ್ಪದ ಆಟೋ ಚಾಲಕ ಸುಮೇಶ್ ಎಂಬವರಿಗೆ ಚಿರತೆ ಕಂಡುಬಂದಿರುವುದಾಗಿ ಹೇಳಲಾಗುತ್ತಿದೆ. ಸುಮೇಶ ಆಟೋರಿಕ್ಷಾದಲ್ಲಿ ಸಂಚರಿಸುತ್ತಿದ್ದಂತೆ ಪರಪ್ಪ ಮಾಳೂರು ಎಂಬಲ್ಲಿ ರಸ್ತೆಯಲ್ಲಿದ್ದ ಚಿರತೆ ಸಮೀಪದ ಕಾಡಿಗೆ ತೆರಳಿದೆ ಎನ್ನಲಾಗುತ್ತಿದೆ. ಇದರಿಂದ ನಾಗರಿಕರು ನಡೆಸಿದ ಪರಿಶೀಲನೆ ವೇಳೆ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದೆ. ಇದರಿಂದ ನಾಗರಿಕರು ಪರಪ್ಪ ಅರಣ್ಯ  ಕಚೇರಿಗೆ ತಲುಪಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಚಿರತೆ ಪ್ರತ್ಯಕ್ಷವದಂತಿ ಹರಡುವುದರೊಂದಿಗೆ ನಾಡಿನಲ್ಲಿ ಆತಂಕ ಸೃಷ್ಟಿಯಾಗಿದೆ.

RELATED NEWS

You cannot copy contents of this page