ಮಂಜೇಶ್ವರ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಹಿಂದುಗಳನ್ನು ಹತ್ಯೆಮಾಡಿದ ಘಟನೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಮಾತೃಶಕ್ತಿ , ಭಜರಂಗದಳ, ದುರ್ಗಾವಾಹಿನಿ ನೇತೃತ್ವದಲ್ಲಿ ನಿನ್ನೆ ಹೊಸಂಗಡಿ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು.
ವಿ.ಹಿಂ.ಪದ ಕಾರ್ಯಾಲಯ ಪ್ರೇರಣಾದಿಂದ ಹೊರಟ ಮೆರ ವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ದರು. ಸಮಾರೋಪ ಸಮಾರಂಭದಲ್ಲಿ ವಿಶ್ವಹಿಂದೂ ಪರಿಷತ್‌ನ ಧರ್ಮ ಪ್ರಸಾರ ಜಿಲ್ಲಾ ಪ್ರಮುಖ ವಾಮನ ಆಚಾರ್ಯ ಮಾತನಾಡಿ, ಅಗಲಿದ ಸಹೋದರರ ಆತ್ಮಕ್ಕೆ ತೃಪ್ತಿ ಯಾಗಬೇಕಾದರೆ ಕೊಲೆ ಕೃತ್ಯ ನಡೆಸಿದ ಭಯೋತ್ಪಾದಕರ ಹುಟ್ಟಡ ಗಿಸಬೇಕೆಂದು ಅವರು ಅಭಿ ಪ್ರಾಯಪಟ್ಟರು. ಆದರ್ಶ್ ಬಿ.ಎಂ ಮಾತನಾಡಿದರು. ವಿವಿಧ ವಲಯಗಳ ನೇತಾರರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಗೋಪಾಲ ಶೆಟ್ಟಿ ಅರಿಬೈಲು, ಕೃಷ್ಣ ಅಮ್ಮಂಗೋಡು, ಸುರೇಶ್ ಕೀಯೂರು, ಸುರೇಶ್ ಶೆಟ್ಟಿ ಪರಂಕಿಲ, ರವಿ ಪರಂಕಿಲ, ಆಶಾ ತೂಮಿನಾಡು, ಹರ್ಷಿತ ಚೆರುಗೋಳಿ, ಸುಸ್ಮಿತಾ ಪ್ರತಾಪನಗರ, ಮೋಹನ ಬಲ್ಲಾಳ್ ಬಾಯಾರು, ಶಂಕರ ಭಟ್ ಉಳುವಾನ, ಪದ್ಮ ಮೋಹನ್‌ದಾಸ್, ಕೃಷ್ಣ ಶಿವಕೃಪಾ ಕುಂಜತ್ತೂರು ನೇತೃತ್ವ ನೀಡಿದರು. ವಿ.ಹಿಂ.ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ಪ್ರಸ್ತಾಪಿಸಿ, ಮಂಜೇಶ್ವರ ಪ್ರಖಂಡ ಪ್ರಧಾನ ಕಾರ್ಯದರ್ಶಿ ರಂಜಿತ್ ವಂದಿಸಿದರು.







