ಪಾಕಿಸ್ತಾನದ ಕರಾಳತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬಹಿರಂಗಪಡಿಸುವ ತಂಡದ ನಾಯಕನಾಗಿ ಶಶಿ ತರೂರ್ ಆಯ್ಕೆ

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ಸರಿಯಾದ ಪಾಠ ಕಲಿಸಿದ  ಬೆನ್ನಲ್ಲೇ ಇದೀಗ ಪಾಕಿಸ್ತಾನದ ಕರಾಳತೆ ಹಾಗೂ ದುಷ್ಕೃತ್ಯಗಳನ್ನು ಅಂತಾರಾಷ್ಟ್ರೀ ಯ ಮಟ್ಟದಲ್ಲೂ ಬಹಿರಂಗಪಡಿಸಲು ಮೋದಿ ಸರಕಾರ ರೂಪು ನೀಡಿದ ವಿಶೇಷ ತಂಡವನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದರೂ ಆಗಿರುವ ಶಶಿ ತರೂರ್  ಮುನ್ನಡೆ ಸಲಿದ್ದಾರೆ. ಕೇಂದ್ರ ಸರಕಾರ ಇಂದು ಬೆಳಿಗ್ಗೆ ಹೊರಡಿಸಿದ ಸೂಚನೆಯಲ್ಲಿ ಈ ವಿಶೇಷ ತಂಡದ ನಾಯಕನನ್ನಾಗಿ ಶಶಿ ತರೂರ್‌ರನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಇದರಂತೆ ವಿವಿಧ ರಾಜಕೀಯ ಪಕ್ಷಗಳ ಏಳು ಮಂದಿ ಪ್ರತಿನಿಧಿಗಳು ಈ ನಿಯೋಗದಲ್ಲಿ ಒಳಗೊಳ್ಳಲಿದ್ದಾರೆ. ಅದರ ನೇತೃತ್ವವನ್ನು ಇದೇ ಸಂದರ್ಭದಲ್ಲಿ ಶಶಿ ತರೂರ್ ವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಈ ವಿಶೇಷ ತಂಡದಲ್ಲಿ ನಮ್ಮ ಪ್ರತಿನಿಧಿ ಯಾಗಿ  ಕಾಂಗ್ರೆಸ್ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಯಾದಿಯಲ್ಲಿ ಶಶಿ ತರೂರ್‌ರ ಹೆಸರನ್ನು ಒಳಪಡಿಸಲಾಗಿಲ್ಲ. ವಿಪಕ್ಷ ನಾಯಕ ರಾಹುಲ್ ಗಾಂಧಿಯವರೇ ಈ ಯಾದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಆ ಯಾದಿಯಲ್ಲಿ ತರೂರ್‌ರನ್ನು ಹೊರತುಪಡಿಸಿದ ನಿಲುವು ಕಾಂಗ್ರೆಸ್ ಪಕ್ಷ ತರೂರ್‌ರೊಂದಿಗೆ ಹೊಂದಿರುವ ವಿಮುಖತೆಯನ್ನು ಬಯಲುಗೊಳಿಸಿದೆ. ಶಶಿ ತರೂರ್ ಈ ಹಿಂದೆ ವಿಶ್ವಸಂಸ್ಥೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರ ಅನುಭವವನ್ನು ಪರಿಗಣಿಸಿ ಪಾಕಿಸ್ತಾನದ ವಿರುದ್ಧದ ಅಂತಾರಾಷ್ಟ್ರೀಯ ಅಭಿಯಾ ನವನ್ನು ನಡೆಸಲು ರಚಿಸಲಾದ ತಂಡದ ನೇತೃತ್ವವನ್ನು ಕೇಂದ್ರ ಸರಕಾರ ಶಶಿ ತರೂರ್‌ಗೆ ನೀಡಿದೆ.

RELATED NEWS

You cannot copy contents of this page