ಪಾಣೂರಿನಲ್ಲಿ ನಾಯಿಯನ್ನು ಕಚ್ಚಿಕೊಂಡು ಹೋದ ಚಿರತೆ: ಸ್ಥಳೀಯರು ಭೀತಿಯಲ್ಲಿ
ಮುಳಿಯಾರು: ಪಂಚಾಯತ್ ವ್ಯಾಪ್ತಿಯ ಪಾಣೂರು, ತೋಟದ ಮೂಲೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿ ರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ಮಣಿಕಂಠನ್ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರಿನ ಅಡಿಭಾಗದಲ್ಲಿ ಮಲಗಿದ್ದ ಸಾಕುನಾ ಯಿಯನ್ನು ಚಿರತೆ ಕಚ್ಚಿ ಕೊಂಡು ಹೋಗಿದೆ. ಇಂದು ಮುಂಜಾನೆ 3.30ಕ್ಕೆ ಘಟನೆ ನಡೆದಿದೆ. ನಾಯಿ ಬೊಗಳುವುದನ್ನು ಕೇಳಿ ಮನೆಮಂದಿ ಎಚ್ಚರಗೊಂಡು ಹೊರಗೆ ಬಂದು ನೋಡಿದ್ದಾರೆ. ಆಗ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗುವ ದೃಶ್ಯ ಕಂಡಿದ್ದಾರೆನ್ನಲಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಶಾಲೆ, ಅಂಗನವಾಡಿ ಮಕ್ಕಳು ನಡೆದು ಹೋಗುವ ದಾರಿ ಮಧ್ಯೆ ಇರುವ ಮನೆಯಲ್ಲಿ ನಾಯಿಗೆ ಚಿರತೆ ಆಕ್ರಮಿಸಿ ಕಚ್ಚಿಕೊಂಡು ಹೋಗಿದೆ. ಅರಣ್ಯ ಇಲಾಖೆ ಅಧಿಕಾ ರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೆಗುರುತನ್ನು ನೋಡಿ ನಾಯಿಯನ್ನು ಕಚ್ಚಿಕೊಂಡು ಹೋಗಿರುವುದು ಚಿರತೆ ಎಂದು ಖಚಿತಪಡಿಸಿ ದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಕಾನತ್ತೂರು, ಪಾಣೂರು ಭಾಗಗಳಲ್ಲಿ ಚಿರತೆ ಕಂಡುಬಂದಿದೆಯೆಂದು ವದಂತಿ ಕೇಳಿಬಂದಿತ್ತು. ವಾರಗಳ ಹಿಂದೆ ಇರಿಯಣ್ಣಿ, ಕುಣಿಯೇರಿಯ ಲ್ಲಿಯೂ ಚಿರತೆ ಕಂಡುಬಂದಿತ್ತು. ಬಳಿಕ ಕಾಡುಪ್ರಾಣಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಗೂಡು ಇರಿಸಿದೆ ಯಾದರೂ ಅದರಿಂದ ಫಲವುಂ ಟಾಗಿಲ್ಲ. ಈ ಮಧ್ಯೆಅಂಗಳದಲ್ಲಿದ್ದ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋದ ಘಟನೆ ನಡೆದಿದೆ.