ಪಾರ್ಕಿಂಗ್: ಡಿವೈಎಸ್ಪಿಯೊಂದಿಗೆ ವಾಗ್ವಾದಕ್ಕಿಳಿದ ಯುವಕನ ವಿರುದ್ಧ ಕೇಸು 

ಕಾಸರಗೋಡು: ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಕಾರು ನಿಲ್ಲಿಸಿರುವುದನ್ನು ಪ್ರಶ್ನಿಸಿದ ಡಿವೈಎಸ್ಪಿಯೊಂದಿಗೆ ವಾಗ್ವಾದಕ್ಕಿಳಿದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಬೇವಿಂಜೆಯ ಮಾಹಿನ್ ಎಂಬಾತನ ವಿರುದ್ಧ ಕೇಸು ದಾಖಲಿಸಿದ್ದು, ಈತನನ್ನು ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ನಿನ್ನೆ ಸಂಜೆ   ವಿದ್ಯಾನಗರ ಮಾಯಿಪ್ಪಾಡಿ ರಸ್ತೆ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಬಸ್ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಹತ್ತಿಸುವ ಸ್ಥಳದಲ್ಲಿ ನಿಲ್ಲಿಸಿದ್ದ ಕಾರನ್ನು ತೆರವುಗೊಳಿಸುವಂತೆ ಡಿವೈಎಸ್ಪಿ ಕೆ. ಸುಧಾಕರನ್  ತಿಳಿಸಿದಾಗ ಅವರೊಂದಿಗೆ ಮಾಹಿನ್ ವಾಗ್ವಾದಕ್ಕಿಳಿದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.

RELATED NEWS

You cannot copy contents of this page