ಪಾರ್ಟಿ ಗ್ರಾಮದಲ್ಲಿ ನೇತಾರರ ವಿರುದ್ಧ ಪೋಸ್ಟರ್ ವಿವಾದವಾದಾಗ ತೆರವು
ಹೊಸದುರ್ಗ: ಸಿಪಿಎಂ ಪಾರ್ಟಿ ಗ್ರಾಮವಾದ ಮುನ್ನಾ ಡ್‌ನಲ್ಲಿ ಕೆಲವು ಸಿಪಿಎಂ ನೇತಾರರ ವಿರುದ್ಧ ಪ್ರತ್ಯಕ್ಷ ಗೊಂಡ ಫ್ಲೆಕ್ಸ್ ಬೋರ್ಡ್‌ಗಳನ್ನು ಪಕ್ಷ ಮಧ್ಯಸ್ಥಿಕೆ ವಹಿಸಿ ತೆರವುಗೊಳಿಸಿದೆ.
ಸಿಪಿಎಂ ನಿಯಂತ್ರಣ ದಲ್ಲಿರುವ ಆಳಿಕೋಡನ್ ಸ್ಮಾರಕ ಗ್ರಾಂಥಾಲಯ ವಾರ್ಷಿಕಕ್ಕೆ ಸಂಬಂಧಿಸಿ ಫ್ಲೆಕ್ಸ್ ಬೋರ್ಡ್ ಸ್ಥಾಪಿಸಲಾಗಿತ್ತು. ಮೊನ್ನೆ ಪ್ರತ್ಯಕ್ಷಗೊಂಡ ಫ್ಲೆಕ್ಸ್‌ನ್ನು ಅದೇ ದಿನ ತೆರವುಗೊಳಿಸಲಾಗಿದೆ. ಡಿವೈಎಫ್‌ಐ-ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ಲೋಕಲ್ ಕಮಿಟಿ ನೇತಾರರ ಮಧ್ಯೆಗಿನ ತರ್ಕವೇ ಫ್ಲೆಕ್ಸ್ ಸ್ಥಾಪಿಸಲು ಕಾgಣವೆಂದು ಹೇಳಲಾಗುತ್ತಿದೆ. ಈ ವಿಷಯ ಪಕ್ಷದಲ್ಲಿ ಚರ್ಚೆಗೆಡೆಯಾಗಿದೆ.